ಆಗಸ್ಟ್ 24ರಂದು ನಟ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ವಿವಾಹ

(ನ್ಯೂಸ್ ಕಡಬ) newskadaba.com  ಹೈದರಾಬಾದ್, ಜು. 27. ಟಾಲಿವುಡ್ ನಟ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಬರುವ ಆಗಸ್ಟ್ 24ರಂದು ಇಟಲಿಯಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿ ಇತ್ತೀಚೆಗೆ ಕುಟುಂಬಿಕರ ಸಮ್ಮುಖದಲ್ಲಿ ಅದ್ದೂರಿಯಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಸದ್ಯ ಈ ಜೋಡಿ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದು, ನಟ ವರುಣ್ ಭಾವೀ ಪತ್ನಿ ಲಾವಣ್ಯ ತ್ರಿಪಾಠಿ ಜೊತೆ ಕಾಫಿ ಡೇಟ್ ಮಾಡುತ್ತಿರುವ ಫೋಟೋ ಭಾರೀ ಸದ್ದು ಮಾಡುತ್ತಿದೆ. 2017ರಲ್ಲಿ ತೆರೆಕಂಡಿದ್ದ ಮಿಸ್ಟರ್ ಸಿನೆಮಾದಲ್ಲಿ ವರುಣ್ ತೇಜ್ ಹಾಗೂ ಲಾವಣ್ಯ ಒಟ್ಟಿಗೆ ನಟಿಸಿದ್ದರು. ಬಳಿಕ ಅವರಿಬ್ಬರು ತುಂಬಾ ಕ್ಲೋಸ್ ಆಗಿದ್ದರು. ಮೊದಲು ತುಂಬಾ ಸ್ನೇಹಿತರಾಗಿದ್ದ ಅವರು ಕ್ರಮೇಣ ಪ್ರೀತಿಯಲ್ಲಿ ಬಿದ್ದಿದ್ದರು.

Also Read  ಕಾಸರಗೋಡು: ಡಿವೈಎಫ್.ಐ ಕಾರ್ಯಕರ್ತನ ಹತ್ಯೆ ಪ್ರಕರಣ ➤ ಘಟನಾ ಸ್ಥಳಕ್ಕೆ ಆರೋಪಿಯನ್ನು ಕರೆ ತಂದು ಮಾಹಿತಿ ಕಲೆ ಹಾಕಿದ ತನಿಖಾ ತಂಡ

error: Content is protected !!
Scroll to Top