‘ಬ್ರಾ’ ಏಕವಚನ, ‘ಪ್ಯಾಂಟೀಸ್’ ಏಕೆ ಬಹುವಚನ – ಟ್ರೋಲ್ ಆದ ಅಮಿತಾಭ್ ಬಚ್ಚನ್ ಟ್ವೀಟ್

(ನ್ಯೂಸ್ ಕಡಬ) newskadaba.com ಮುಂಬೈ, ಜು. 27. ಅಮಿತಾಭ್‌ ಬಚ್ಚನ್‌ ಅವರು 2010ರಲ್ಲಿ ಬ್ರಾ ಏಕೆ ಏಕವಚನ, ಪ್ಯಾಂಟೀಸ್‌ ಏಕೆ ಬಹುವಚನ’ ಎಂದು ತಮಾಷೆಯಾಗಿ ಟ್ವೀಟ್‌ ಮಾಡಿದ್ದರು. ಪದಗಳ ಸಂಬೋಧನೆ ಕುರಿತು ಸಿಲ್ಲಿ ಪ್ರಶ್ನೆ ಕೇಳಿದ್ದರು. ಇದು ಈಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಇದಕ್ಕೆ ಸಂಬಂಧಿಸಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅರ್ಥೈಸಿಕೊಂಡು ಅಮಿತಾಭ್‌ ಬಚ್ಚನ್‌ ಅವರಿಗೆ ಟಾಂಗ್‌ ಕೊಟ್ಟಿದ್ದಾರೆ. ಓರ್ವ ವ್ಯಕ್ತಿ “ಕೊನೆಗೂ ಒಬ್ಬರಾದರೂ ತುಂಬ ಪ್ರಮುಖ ಪ್ರಶ್ನೆ ಕೇಳಿದರು” ಎಂದು ವ್ಯಂಗ್ಯವಾಡಿದ್ದರೆ “ತುಂಬ ಒಳ್ಳೆಯ ಪ್ರಶ್ನೆ. ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ ಮುಂದಿನ ಸೀಸನ್‌ನಲ್ಲಿ ಈ ಪ್ರಶ್ನೆ ಕೇಳಿ” ಎಂದು ಮತ್ತೊಬ್ಬರು ಕುಟುಕಿದ್ದಾರೆ. ಹಾಗೆಯೇ, “ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ” ಎಂದು ಮತ್ತೋರ್ವ ವ್ಯಕ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗೆ ಹಲವು ಜನ ಹಳೆಯ ಟ್ವೀಟ್‌ಗೆ ಈಗ ಪ್ರತಿಕ್ರಿಯಿಸಿದ್ದಾರೆ.

Also Read  ವಿಶ್ವಕಪ್ ಗೆ ನಟ ಶಾರುಖ್ ಖಾನ್ ರಾಯಭಾರಿ

error: Content is protected !!
Scroll to Top