ಅಕ್ಟೋಬರ್ 15ರಂದು ನಿಗದಿಯಾಗಿದ್ದ ವಿಶ್ವಕಪ್ ದಿನಾಂಕ ಬದಲಾವಣೆ ಸಾಧ್ಯತೆ

(ನ್ಯೂಸ್ ಕಡಬ) newskadaba.com  ಹೊಸದಿಲ್ಲಿ, ಜು. 26. ನವರಾತ್ರಿ ಹಬ್ಬದ ಹಿನ್ನೆಲೆ ಅಕ್ಟೋಬರ್ 15ರಂದು ಅಹಮದಾಬಾದ್ ನಲ್ಲಿ ನಿಗದಿಪಡಿಸಲಾಗಿದ್ದ ಭಾರತ ಹಾಗೂ ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಕ್ರಿಕೆಟ್ ವಿಶ್ವಕಪ್ 2023 ಪಂದ್ಯದ ದಿನಾಂಕ ಬದಲಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಅಕ್ಟೋಬರ್ 15 ರಂದು ನವರಾತ್ರಿಯ ಮೊದಲ ದಿನವಾಗಿದ್ದು, ಅಂದು ಅಹಮದಾಬಾದ್ ನಲ್ಲಿ ಐಸಿಸಿ ಪಂದ್ಯವನ್ನು ನಿಗದಿಪಡಿಸಿದೆ. ನವರಾತ್ರಿ ಗುಜರಾತ್ ನಾದ್ಯಂತ ಗಾರ್ಬಾ ನೃತ್ಯಗಳೊಂದಿಗೆ ಆಚರಿಸಲಾಗುವ ಮಹತ್ವದ ಹಬ್ಬವಾಗಿದ್ದು, ಭದ್ರತೆಯ ಕಾರಣದಿಂದ ಬಿಸಿಸಿಐಗೆ ಪ್ರಯಾಣದ ವೇಳಾಪಟ್ಟಿಯನ್ನು ಮರು ಪರಿಶೀಲಿಸುವಂತೆ ಸೂಚಿಸಲಾಗಿದೆ. ವೇಳಾಪಟ್ಟಿ ಬದಲಾವಣೆಯಿಂದ ಈಗಾಗಲೇ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಿಸಲು ಟಿಕೆಟ್ ಗಳನ್ನು ಕಾಯ್ದಿರಿಸಿದ ಕ್ರಿಕೆಟ್ ಅಭಿಮಾನಿಗಳಿಗೆ ಸಮಸ್ಯೆ ಉಂಟಾಗಬಹುದು.

Also Read  ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆ ► ಕ್ರೀಡೆಯಲ್ಲಿ ತಂಡಕ್ಕೆ ಸಮಗ್ರ ಪ್ರಶಸ್ತಿ

ನವರಾತ್ರಿ ಹಬ್ಬದ ಕಾರಣದಿಂದ ವಿಶ್ವಕಪ್ ದಿನಾಂಕವನ್ನು ಬದಲಾಯಿಸುವಂತೆ ಭದ್ರತಾ ಏಜೆನ್ಸಿಗಳು ಬಿಸಿಸಿಐಗೆ ಎಚ್ಚರಿಕೆ ನೀಡಿರುವುದರಿಂದ ಭಾರತ ಹಾಗೂ ಪಾಕಿಸ್ತಾನದ ವಿಶ್ವಕಪ್ ಪಂದ್ಯದ ದಿನಾಂಕ ಬದಲಾಗಬಹುದು. ಈ ಬಗ್ಗೆ ಏಜೆನ್ಸಿಗಳು ನಮಗೆ ತಿಳಿಸಿದ್ದು, ನಾವು ಶೀಘ್ರದಲ್ಲೇ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಮೂಲಗಳು ತಿಳಿಸಿವೆ.

error: Content is protected !!
Scroll to Top