ಯೂಟ್ಯೂಬ್ ವಿಡಿಯೋ ಅನುಕರಣೆಯಿಂದ ಪ್ರಾಣ ಕಳೆದುಕೊಂಡ ಬಾಲಕ



(ನ್ಯೂಸ್ ಕಡಬ)newskadaba.com ತೆಲಂಗಾಣ, ಜು.24. 11 ವರ್ಷದ ಬಾಲಕನೊಬ್ಬ ಯೂಟ್ಯೂಬ್ ವಿಡಿಯೋವನ್ನು ಅನುಕರಣೆ ಮಾಡಲು ಹೋಗಿ ಜೀವ ಕಳೆದುಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮೃತ ಬಾಲಕನನ್ನು 6ನೇ ತರಗತಿಯ ವಿದ್ಯಾರ್ಥಿ ಉದಯ್ (11) ಎಂದು ಗುರುತಿಸಲಾಗಿದೆ.





ರಾತ್ರಿ ಊಟ ಮುಗಿಸಿ ತನ್ನ ಕೋಣೆಗೆ ಹೋದವನು ಬಾಗಿಲು ಚಿಲಕ ಹಾಕಿಕೊಂಡು ಮೊಬೈಲ್​ ನೋಡಲು ಪ್ರಾರಂಭಿಸಿದ್ದಾನೆ. ಉದಯ್ ಪೋಷಕರು ಎಷ್ಟೇ ಕರೆದರೂ ಉತ್ತರ ನೀಡಲಿಲ್ಲ, ಕರೆ ಮಾಡಿದರೂ ಪ್ರತಿಕ್ರಿಯಿಸಲಿಲ್ಲ, ನಂತರ ಅವರು ಬಾಗಿಲು ಒಡೆದು ನೋಡಿದಾಗ ಆತ ನೇಣುಬಿಗಿದ ಸ್ಥಿತಿಯಲ್ಲಿ ಮೊಳೆಯಲ್ಲಿ ನೇತಾಡುತ್ತಿರುವುದು ಕಂಡುಬಂದಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಬಾಲಕ ಮೃತಪಟ್ಟಿದಾನೆ ಎನ್ನಲಾಗಿದೆ. ಇನ್ನು ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿರ್ಸಿಲ್ಲಾ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.






 

error: Content is protected !!
Scroll to Top