ಸಾಲು ಸಾಲು ರಜೆಗಳಿಂದಾಗಿ ನಾಳೆಯಿಂದ ಬ್ಯಾಂಕ್ ವ್ಯವಹಾರ ಸ್ಥಗಿತ ► ಬ್ಯಾಂಕ್ ವ್ಯವಹಾರಗಳಿದ್ದಲ್ಲಿ ಇಂದೇ ಮುಗಿಸಿಬಿಡಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.24. ಜನವರಿ 25 ರಂದು ರಾಜ್ಯ ಬಂದ್ ಸೇರಿದಂತೆ ನಾಲ್ಕು ದಿನಗಳ ಕಾಲ ಬ್ಯಾಂಕ್ ಗೆ ಸಾಲು ಸಾಲು ರಜೆಗಳಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ವಹಿವಾಟು ಸೇರಿದಂತೆ, ಎಟಿಎಂ ಸೇವೆಗಳು ಬಹುತೇಕ ಸ್ಥಗಿತಗೊಳ್ಳಲಿದ್ದು, ಈ ನಿಟ್ಟಿನಲ್ಲಿ ನಿಮಗೆ ಬ್ಯಾಂಕ್ ನಲ್ಲಿ ಏನಾದರೂ ಕೆಲಸವಿದ್ದಲ್ಲಿ ಇಂದೇ ನಿಮ್ಮ ಕೆಲಸಗಳನ್ನು ಮುಗಿಸಿಕೊಂಡು ಬಿಡಿ‌.

ಜನವರಿ 25 ಗುರುವಾರ ರಾಜ್ಯ ಬಂದ್ ಇರುವುದರಿಂದ ಅಂದು ಬಂದ್ ಹಿನ್ನೆಲೆಯಲ್ಲಿ ಬ್ಯಾಂಕ್ ಗಳು ಕೆಲಸ ಮಾಡುವುದು ಅನುಮಾನವಾಗಿದ್ದು, ಶುಕ್ರವಾರ 26 ರಂದು ಗಣರಾಜ್ಯೋತ್ಸವ ಅಂಗವಾಗಿ ಬ್ಯಾಂಕ್‌ ಗೆ ರಜೆಯಿದೆ‌. ಶನಿವಾರ ಜನವರಿ 27 ರಂದು ಬ್ಯಾಂಕ್ ಗೆ ನಾಲ್ಕನೇ ಶನಿವಾರದ ರಜೆ ಇದೆ. ಜನವರಿ 28 ಭಾನುವಾರದ ರಜೆ ಸೇರಿದಂತೆ ಸಾಲು ಸಾಲು ರಜೆಯಿಂದ ಬ್ಯಾಂಕ್ ಬಂದ್ ಆಗಲಿವೆ.

Also Read  ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ವಿಧಿವಶ

error: Content is protected !!
Scroll to Top