ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಸಲುವಾಗಿ ಹಿಮ್ಮುಖವಾಗಿ ಚಲಿಸಿದ ರೈಲು.!

(ನ್ಯೂಸ್ ಕಡಬ)newskadaba.com ಕೊಚ್ಚಿ,ಮೇ.22  ನಿಗದಿತ ನಿಲ್ದಾಣದಲ್ಲಿ ನಿಲುಗಡೆ ನೀಡದೇ ಮುಂದಕ್ಕೆ ಚಲಿಸಿದ ರೈಲು, ಕೊನೆಗೆ ಪ್ರಯಾಣಿಕರು ಮತ್ತು ರೈಲು ಅಧಿಕಾರಿಗಳನ್ನು ಹತ್ತಿಸಿಕೊಳ್ಳುವ ಸಲುವಾಗಿ ಒಂದು ಕಿಲೋಮೀಟರ್ ಹಿಮ್ಮುಖವಾಗಿ ಚಲಿಸಿದ ವಿಚಿತ್ರ ಪ್ರಕರಣ ವರದಿಯಾಗಿದೆ.ಮಾವೇಲಿಕ್ಕರ ಮತ್ತು ಚೆಂಗನ್ನೂರು ನಿಲ್ದಾಣ ನಡುವಿನ ಡಿ ದರ್ಜೆ ನಿಲ್ದಾಣವಾದ ಚೆರಿಯನಾಡ್‌ನಲ್ಲಿ ಈ ಘಟನೆ ಸಂಭವಿಸಿದೆ.

ಶೋರನೂರಿಗೆ ಹೊರಟಿದ್ದ ವೇನಾಡ್ ಎಕ್ಸ್‌ಪ್ರೆಸ್ ರೈಲು ಆಲಪ್ಪುಝದ ಚೆರಿಯನಾಡ್ ನಿಲ್ದಾಣದಲ್ಲಿ ನಿಲುಗಡೆ ನೀಡಬೇಕಿತ್ತು. ಈ ಘಟನೆಯಿಂದಾಗಿ ರೈಲಿನ ವೇಳಾಪಟ್ಟಿಯಲ್ಲಿ ಸುಮಾರು ಎಂಟು ನಿಮಿಷ ವ್ಯತ್ಯಯವಾಯಿತು. ಆದರೆ ಲೋಕೊ ಪೈಲಟ್ ಮುಂದಿನ ಪ್ರಯಾಣದಲ್ಲಿ ಅದನ್ನು ಸರಿಪಡಿಸಿಕೊಂಡರು ಎಂದು ಹೇಳಲಾಗಿದೆ.

 

 

 

 

Scroll to Top