ಬಂಟ್ವಾಳ:  ದಾಖಲೆ ರಹಿತ ನಗದು ಸಾಗಾಟ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಏ.26. ಫರಂಗಿಪೇಟೆ ಚೆಕ್ ಪೋಸ್ಟ್ ನಲ್ಲಿ ಚುನಾವಣಾ ತಪಾಸಣೆ ನಡೆಯುತ್ತಿದ್ದ ಸಂದರ್ಭ ವಾಹನ ತಪಾಸಣೆ ವೇಳೆ ದಾಖಲೆ ರಹಿತ ನಗದು ಸಾಗಾಟ ಪ್ರಕರಣ ಪತ್ತೆಯಾಗಿದೆ.

ಒಟ್ಟು 3 ಲಕ್ಷ ರೂ ವಾಹನದಲ್ಲಿದ್ದು, ಈ ಕುರಿತು ವಾಹನದವರಲ್ಲಿ ದಾಖಲೆ ಕೇಳಿದಾಗ ಸಮರ್ಪಕ ಉತ್ತರ ದೊರೆಯಲಿಲ್ಲ. ಈ ಹಿನ್ನೆಲೆಯಲ್ಲಿ ತಪಾಸಣಾಧಿಕಾರಿಗಳು ನಗದನ್ನು ವಶಪಡಿಸಿಕೊಂಡಿದ್ದಾರೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದ ವೇಳೆ ನಗದು ಕಂಡುಬಂದಿದ್ದು, ಕೂಡಲೇ ಅದನ್ನು ಚುನಾವಣಾ ಸಂಬಂಧಿ ಪರಿಶೀಲನಾ ಸಮಿತಿಗೆ ಹಸ್ತಾಂತರಿಸಿದ್ದು, ತನಿಖೆ ನಡೆಯುತ್ತಿದೆ.

Also Read  ಹೊಟೇಲ್, ಉಪಾಹಾರ, ತಿನಿಸು ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ: ಸಚಿವ ದಿನೇಶ್ ಗುಂಡೂರಾವ್ ಘೋಷಣೆ

 

 

error: Content is protected !!
Scroll to Top