ಉಡುಪಿ: ನಾಳೆ(ಏ.27)ರಂದು ರಾಹುಲ್ ಗಾಂಧಿ ಉಚ್ಛಿಲಕ್ಕೆ ➤ ಸ್ಥಳ ಪರಿಶೀಲಿಸಿದ ಎಸ್ಪಿ

(ನ್ಯೂಸ್ ಕಡಬ)newskadaba.com ಉಡುಪಿ, ಏ.26. ನಾಳೆ ಏ. 27ರಂದು  ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಉಡುಪಿಯ ಉಚ್ಛಿಲಕ್ಕೆ ಬರಲಿದ್ದು ಮೀನುಗಾರರ ಸಮಾವೇಶ ಅವರ ಜೊತೆಗೆ ಸಂವಾದ ಕಾರ್ಯಕ್ರಮ ‌ನಡೆಯಲಿದೆ.

ಸಭೆ ಸಂವಾದ ಕಾರ್ಯಕ್ರಮ ಉಚ್ಛಿಲ‌ ಮಹಾಲಕ್ಷ್ಮೀ ದೇವಸ್ಥಾನದ ಶಾಲಿನಿ‌ ಜಿ ಶಂಕರ್ ಸಭಾಂಗಣದಲ್ಲಿ‌‌ ನಡೆಯಲಿದೆ. ಕಾಪು‌ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನೇತ್ರತ್ವದಲ್ಲಿ ಸಭೆ ಸಂವಾದ ನಡೆಯುವ ಸ್ಥಳವನ್ನು ಎಸ್ ಪಿ ಅಕ್ಷಯ್ ಮಚ್ಛಿಂದ್ರ ತಂಡ ಪರಿಶೀಲನೆ ನಡೆಸಿದರು.

 

Scroll to Top