(ನ್ಯೂಸ್ ಕಡಬ) newskadaba.com ರಾಜ್ ಕೋಟ್, ಜ.06. ವೃದ್ಧ ತಾಯಿಯನ್ನು ಪಾಲನೆ ಮಾಡಲು ಕಷ್ಟವಾಗುತ್ತದೆ ಎಂದು ವಿದ್ಯಾವಂತ ಮಗನೇ ಟೆರೇಸ್ ನಿಂದ ತಳ್ಳಿ ಹಾಕಿ ಕೊಂದ ಹೃದಯ ವಿದ್ರಾವಕ ಘಟನೆ ರಾಜ್ ಕೋಟ್ ನಲ್ಲಿ ನಡೆದಿದೆ.
ತಾಯಿಯನ್ನು ಕೊಂದ ಮಗನನ್ನು ರಾಜ್ ಕೋಟ್ ನ ಫಾರ್ಮಸಿ ಕಾಲೇಜ್ನ ಸಹಾಯಕ ಪ್ರೊಫೆಸರ್ ಸಂದೀಪ್ ನಾಥ್ವಾನಿ ಎಂದು ಗುರುತಿಸಲಾಗಿದೆ. ಈತ ತನ್ನ ತಾಯಿ ಜಯಶ್ರೀ ಬೆನ್ ರನ್ನು ಟೆರೆಸ್ ನಿಂದ ತಳ್ಳಿ ಹಾಕಿ ಕೊಂದ ನಂತರ ಬಾಲ್ಕಣಿಯಲ್ಲಿ ಕುಳಿತಿದ್ದ ತಾಯಿ ಕಾಲು ಎಡವಿ ಕೆಳಗೆ ಬಿದ್ದಿರುವುದಾಗಿ ಪೊಲೀಸ್ ಠಾಣೆಯಲ್ಲಿ ಹೇಳಿಕೆ ನೀಡಿದ್ದ. ಆದರೆ ಅಪರಿಚಿತ ದಾರಿಹೋಕ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಪೊಲೀಸರು ನಡೆಸಿದ ಸಮಗ್ರ ತನಿಖೆಯಲ್ಲಿ ಕೊಲೆಯೆಂದು ಸಾಬೀತಾಗಿದೆ.
ವಯಸ್ಸಾಗಿರುವುದರಿಂದ ಪಾಲನೆ ಮಾಡಲು ಸಮಯ ವಿಲ್ಲದಿರುವುದರಿಂದ ಕ್ರತ್ಯ ನಡೆಸಿರುವುದಾಗಿ ಸಂದೀಪ್ ನಾಥ್ವಾನಿ ಪೊಲೀಸರಲ್ಲಿ ಹೇಳಿದ್ದಾನೆ. ಅಪಾರ್ಟ್ ಮೆಂಟ್ ನ ಸಿ.ಸಿ ಕ್ಯಾಮರಾ ಸೆರೆ ಹಿಡಿದ ದೃಶ್ಯದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.