ಸುಳ್ಯ: ಮನೆ ಮೇಲೆ ಬಿದ್ದ ಮರ- ಮನೆಯವರಿಗೆ ಗಾಯ ➤ ಅಪಾರ ನಷ್ಟ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ. 15. ಮನೆಮೇಲೆ ಮರಬಿದ್ದ ಪರಿಣಾಮ ಮನೆಯಲ್ಲಿದ್ದವರು ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕ ಎಂಬಲ್ಲಿ ನಡೆದಿದೆ.


ಕೇರ್ಪಡ ಪಲ್ಲತಡ್ಕದ ಮೊಗೇರ್ಕಳ ಸೇವಾ ಸಮಿತಿ ಅಧ್ಯಕ್ಷ ರಮೇಶ್‌ ಅವರ ಮನೆಗೆ ರಾತ್ರಿವೇಳೆ ಮರ ಬಿದ್ದ ಪರಿಣಾಮ ಮನೆಯ ಮೇಲ್ಛಾವಣಿಯ ಹಂಚು ಮನೆಯಲ್ಲಿದ್ದವರ ತಲೆಗೆ ಬಿದ್ದು ಗಾಯಗಳಾಗಿದೆ. ಮನೆಯ ಹಂಚುಗಳು ಹಾಗೂ ರೀಪ್‌ ತುಂಡಾಗಿ ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

Scroll to Top