13 ವರ್ಷದ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದ 47 ವರ್ಷದ ಶಿಕ್ಷಕ!

(ನ್ಯೂಸ್ ಕಡಬ) newskadaba.com ಕಾನ್ಪುರ, ಜ.09.   47 ವರ್ಷದ ಶಿಕ್ಷಕನೋರ್ವ 13 ವರ್ಷದ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದಿರುವ ಘಟನೆ ಕನೌಜ್ ಬಳಿ ವರದಿಯಾಗಿದೆ.

ಶಿಕ್ಷಕ ವಿದ್ಯಾರ್ಥಿನಿಗೆ ಪ್ರೇಮ ಪತ್ರವನ್ನು ಬರೆದು, ಅದನ್ನು ಓದಿದ ಬಳಿಕ ಹರಿದು ಹಾಕು ಎಂದಿದ್ದಾನೆ. ಶಿಕ್ಷಕನ ಈ ಪ್ರೇಮ ಪತ್ರವನ್ನು ಓದಿದ ಬಳಿಕ ಅದನ್ನು ವಿದ್ಯಾರ್ಥಿನಿ ತಮ್ಮ ಪೋಷಕರಿಗೆ ತೋರಿಸಿದ್ದಾಳೆ ಎನ್ನಲಾಗಿದೆ. ವಿದ್ಯಾರ್ಥಿನಿಯ ಪೋಷಕರು ಠಾಣೆಯಲ್ಲಿ ಶಿಕ್ಷಕನ ವಿರುದ್ಧ ದೂರು ದಾಖಲಿಸಿದ್ದಾರೆ. ಠಾಣೆಗೆ ಹೋಗುವ ಮೊದಲು ಪೋಷಕರು ಶಿಕ್ಷಕನ ಬಳಿ ಹೋಗಿ, ಈ ರೀತಿಯ ವರ್ತನೆಗೆ ಕ್ಷಮೆ ಕೇಳಿ ಎಂದಿದ್ದಾರೆ. ಆದರೆ ಶಿಕ್ಷಕ ಕ್ಷಮೆ ಕೇಳದೆ ಬೆದರಿಕೆ ಹಾಕಿದ್ದಾರೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ. ಪತ್ರದಲ್ಲಿ ಶಿಕ್ಷಕ ವಿದ್ಯಾರ್ಥಿನಿಯ ಹೆಸರು ಬರೆದು, ನಿನ್ನನ್ನು ನಾನು ತುಂಬಾ ಪ್ರೀತಿಸುತ್ತೇನೆ. ಚಳಿಗಾಲದ ರಜಾ ದಿನದಲ್ಲಿ ಮಿಸ್‌ ಮಾಡಿಕೊಳ್ಳುತ್ತೇನೆ. ನಿನಗೆ ಸಮಯ ಸಿಕ್ಕರೆ ನನಗೆ ಕಾಲ್‌ ಮಾಡು, ರಜೆಯ ಒಂದು ದಿನ ಮೊದಲು ನನ್ನನು ಭೇಟಿಯಾಗು, ನಿನ್ನನು ಯಾವಾಗಲೂ ಪ್ರೀತಿಸುತ್ತೇನೆ. ಪತ್ರವನ್ನು ಓದಿದ ಮೇಲೆ ಹರಿದು ಹಾಕು, ಯಾರಿಗೂ ಈ ಪತ್ರ ತೋರಿಸಬೇಡ ಎಂದು ಪತ್ರದಲ್ಲಿ ಬರೆಯಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಶಿಕ್ಷಕರ ಯೂನಿಯನ್‌ ಅಧ್ಯಕ್ಷ, ಶಿಕ್ಷಕನ ತಪ್ಪು ಸಾಬೀತಾದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Also Read  ಬಸ್ ಟಾಪ್ ನಲ್ಲಿ ಮಲಗಿದ್ದ ವ್ಯಕ್ತಿ ಕೆಳಗೆ ಬಿದ್ದು ಮೃತ್ಯು..!

error: Content is protected !!
Scroll to Top