ದಿನಗೂಲಿ ಕೆಲಸ ಮಾಡಿ ತಂದೆಯಿಲ್ಲದ ತಬ್ಬಲಿಗಳನ್ನು ಐಎಎಸ್ ಮಾಡಿಸಿದ ತಾಯಿ ► ಬಡತನದ ಮಧ್ಯೆಯೂ ಐಎಎಸ್ ಪಾಸ್ ಮಾಡಿದ ಮೂವರು ಸಹೋದರಿಯರು

(ನ್ಯೂಸ್ ಕಡಬ) newskadaba.com ಕಡಬ, ನ.27. ತಂದೆ ಇಲ್ಲದೆ ತಬ್ಬಲಿಯಾದ ಮೂವರು ಹೆಣ್ಣು ಮಕ್ಕಳನ್ನು ಬಡತನದ ಬೇಗುದಿಯ ಮಧ್ಯೆಯೂ ಸಮಾಜದ ಮುಖ್ಯವಾಹಿನಿಗೆ ಕರೆತಂದು ಅತ್ಯುನ್ನತ ಪದವಿಯಾದ ಐಎಎಸ್ ಕಲಿಸಿ ಹೆತ್ತ ತಾಯಿಯೋರ್ವಳು ದೇಶಕ್ಕೆ ಮಾದರಿಯಾಗಿದ್ದಾರೆ.

ಇದು ದೇಶದಲ್ಲೇ ಬಲು ಅಪರೂಪದ ಘಟನೆ ಎಂದು ತಿಳಿಯಬಹುದಾಗಿದ್ದು, ತನ್ನ ಮೂವರು ಹೆಣ್ಣು ಮಕ್ಕಳನ್ನು ಕೂಲಿ ಕೆಲಸ ಮಾಡುತ್ತಲೇ ಈ ತಾಯಿ ಉನ್ನತ ಅಧಿಕಾರಿಗಳನ್ನಾಗಿ ಮಾಡಿದ್ದಾರೆ. ರಾಜಸ್ಥಾನದಿಂದ ಸಿವಿಲ್ ಸರ್ವಿಸಸ್ ಗೆ ಮೂವರು ಸಹೋದರಿಯರು ಆಯ್ಕೆಯಾಗಿದ್ದಾರೆ. ಅವರೇ ಕಮಲ, ಗೀತ, ಮಮತಾ. ಇವರು ಕ್ರಮವಾಗಿ 32, 64, 128 ರ್ಯಾಂಕ್ ಗಳನ್ನು ಪಡೆದರು. ತಾಯಿ ದಿನಗೂಲಿ ಮಾಡುತ್ತಾ ವೃತ್ತಿಯಲ್ಲಿ ಅಗಸರಾಗಿರುವ ಇವರದು ತುಂಬಾ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬ. ಇಂತಹ ಸ್ಥಿತಿಯಲ್ಲಿ ಮೂವರು ಹೆಣ್ಣುಮಕ್ಕಳನ್ನು ಓದಿಸಿ ಅವರನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ.

Also Read  ಸಾನಿಟೈಸರ್ ಸೇವಿಸಿ ತಾಯಿ, ಮಗ ಸಾವು..!

ಅದೆಷ್ಟೋ ಅವಕಾಶಗಳು, ಆರ್ಥಿಕ ಸಂಪನ್ಮೂಲ, ಕುಟುಂಬದಲ್ಲಿ ತೊಂದರೆ ಇಲ್ಲದೆ ಎಲ್ಲಾ ಸೌಲಭ್ಯಗಳಿದ್ದು, ರಾಜಕೀಯವಾಗಿ ಪ್ರಬಲವಾಗಿದ್ದರೂ ಆ ಮಟ್ಟಕ್ಕೆ ಬೆಳೆಯುವುದು ನಿಜಕ್ಕೂ ಕಷ್ಟ. ಆದರೆ ಮೂವರು ಕಷ್ಟಪಟ್ಟು ಓದಿ ಈಗ ಯುವ ಜನತೆಗೆ ಸ್ಫೂರ್ತಿಯಾಗಿದ್ದಾರೆ.

error: Content is protected !!
Scroll to Top