ಭಾರತದ ಅತಿ ಅಗ್ಗದ 5G ಸ್ಮಾರ್ಟ್​ಫೋನ್ Lava Blaze ಇಂದಿನಿಂದ ಖರೀಗೆ ಲಭ್ಯ

(ನ್ಯೂಸ್ ಕಡಬ) newskadaba.com ನ.15: ಮಾರುಕಟ್ಟೆಯಲ್ಲಿ ಸದಾ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿ ಸುದ್ದಿಯಾಗುವ ಭಾರತದ ಪ್ರಸಿದ್ಧ ಲಾವಾ ಕಂಪನಿ ದೇಶದಲ್ಲಿ ಊಹಿಸಲಾಗದ ಬೆಲೆಗೆ ಲಾವಾ ಬ್ಲೆಂಜ್‌ ಎಂಬ ಆಕರ್ಷಕ 5ಜಿ ಫೋನನ್ನು ಔಪಚಾರಿಕವಾಗಿ ಪರಿಚಯಿಸಿತ್ತು. ಕಳೆದ ತಿಂಗಳು ಅಕ್ಟೋಬರ್​ನಲ್ಲಿ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ 2022 ಸಮಾವೇಶದಲ್ಲಿ ಕಂಪನಿಯು ಈ ಫೋನ್ ಅನ್ನು ಅನಾವರಣ ಮಾಡಿತ್ತು. ದೇಶದ ಅತಿ ಅಗ್ಗದ 5ಜಿ ಫೋನ್ ಎನಿಸಿಕೊಂಡಿರುವ ಈ ಸ್ಮಾರ್ಟ್​ಫೋನ್ ಇಂದಿನಿಂದ ಖರೀದಿಗೆ ಸಿಗಲಿದೆ. ಪ್ರಸಿದ್ಧ ಇ ಕಾಮರ್ಸ್ ತಾಣ ಅಮೆಜಾನ್‌ ಮೂಲಕ ಮಾರಾಟ ಪ್ರಾರಂಭಿಸಲಿದೆ ಎಂದು ಲಾವಾ ಹೇಳಿಕೆ ನೀಡಿದೆ.

ಲಾವಾ ಬ್ಲೇಜ್‌ 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಕೇವಲ ಒಂದು ಮಾದರಿಯಲ್ಲಷ್ಟೆ ಖರೀದಿಗೆ ಸಿಗಲಿದೆ. ಇದರ 4GB RAM + 128GB ಸ್ಟೋರೇಜ್ ಮಾದರಿಗೆ ಕೇವಲ 9,999ರೂ. ಬೆಲೆಯನ್ನು ನಿಗದಿ ಮಾಡಲಾಗಿದೆ. ನವೆಂಬರ್ 15 ಇಂದಿನಿಂದ ಅಮೆಜಾನ್‌ನಲ್ಲಿ ಮೊದಲ ಸೇಲ್ ಶುರು ಮಾಡಲಿದೆ. ಇದು ಗ್ಲಾಸ್ ಬ್ಲೂ ಮತ್ತು ಗ್ಲಾಸ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ. ಇದು 720 x 1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.51 ಇಂಚಿನ HD+ IPS ಡಿಸ್‌ಪ್ಲೇಯನ್ನು ಹೊಂದಿದೆ.

Also Read  ಇಂದು (ಸೆ. 24) ಸುಳ್ಯ ತಾಲೂಕು ದಸರಾ ಕ್ರೀಡಾಕೂಟ

ಲಾವಾ ಬ್ಲೇಜ್‌ 5G ಸ್ಮಾರ್ಟ್‌ಫೋನ್‌ AI- ಬೆಂಬಲಿತ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದರ ಜೊತೆಗೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇದರಲ್ಲಿರುವ ಕ್ಯಾಮೆರಾ ಫೀಚರ್ಸ್‌ಗಳಲ್ಲಿ AI, ಬ್ಯೂಟಿ, ಫಿಲ್ಟರ್‌ಗಳು, GIF, HDR, ಮ್ಯಾಕ್ರೋ, ಮೋಷನ್, ನೈಟ್, ಪನೋರಮಾ, ಪೋರ್ಟ್ರೇಟ್, ಸ್ಲೋ ಮೋಷನ್ ಟೈಮ್‌ಲ್ಯಾಪ್ಸ್ ನಂತಹ ವಿಭಿನ್ನ ಫೀಚರ್ಸ್‌ಗಳನ್ನು ಒಳಗೊಂಡಿದೆ.

Also Read  ಮಂಗಳೂರು-ಬೆಂಗಳೂರು ರೈಲು ಸಂಚಾರ ರದ್ದು        ಕೆಲ ರೈಲುಗಳ ಮಾರ್ಗ ಬದಲಾವಣೆ     

error: Content is protected !!
Scroll to Top