4,000 ಸಕ್ರಿಯ ಕೊರೊನಾ ಕೇಸ್‌ಗಳ ಗಡಿಯಲ್ಲಿ ಭಾರತ; ಕೇರಳದಲ್ಲಿಯೇ ಅತಿ ಹೆಚ್ಚು ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಜೂ.02:  ದೇಶಾದ್ಯಂತ ದಿನದಿಂದ ದಿನಕ್ಕೆ ಕೋವಿಡ್ ಕೇಸ್ ಹೆಚ್ಚಾಗುತ್ತಿದೆ. ಸದ್ಯ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 4,000 ಗಡಿಯಲ್ಲಿದೆ. ಈ ಪೈಕಿ ಕೇರಳ ರಾಜ್ಯದಲ್ಲಿಯೇ 1,400 ಕೊರೊನಾ ಕೇಸ್‌ಗಳು ವರದಿಯಾಗಿವೆ.

ಭಾರತದಲ್ಲಿ ಕೋವಿಡ್ ಕೇಸ್‌ಗಳ ಸಂಖ್ಯೆ 4,000ದ ಗಡಿಯಲ್ಲಿದ್ದು, ಸೋಮವಾರ 3,961 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಅತೀ ಹೆಚ್ಚು ಪ್ರಕರಣಗಳು ಕೇರಳದಲ್ಲಿ ವರದಿಯಾಗುತ್ತಿವೆ. ಕಳೆದ 24 ಗಂಟೆಯಲ್ಲಿ ತಮಿಳುನಾಡು, ಕೇರಳ, ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ತಲಾ ಒಬ್ಬೊಬ್ಬರಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಕೇರಳದಲ್ಲಿ 1,400, ಮಹಾರಾಷ್ಟ್ರ 506, ದೆಹಲಿ 483, ಗುಜರಾತ್ 338, ಪಶ್ಚಿಮ ಬಂಗಾಳ 331, ಕರ್ನಾಟಕ 253, ತಮಿಳುನಾಡು 189, ಉತ್ತರ ಪ್ರದೇಶ 157 ಕೊರೊನಾ ಕೇಸ್‌ಗಳು ದಾಖಲಾಗಿವೆ.

Scroll to Top