‘LPG’ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 115 ರೂ. ಇಳಿಕೆ

(ನ್ಯೂಸ್ ಕಡಬ) newskadaba.com ನವದೆಹಲಿ, ನ.01: ಎಲ್ ಪಿಜಿ ಸಿಲಿಂಡರ್ ಗಳ ಹೊಸ ದರಗಳನ್ನು ಬಿಡುಗಡೆ ಮಾಡಲಾಗಿದೆ. ಎಲ್ ಪಿಜಿ (LPG) ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಆದರೆ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಲಾಗಿದೆ. 19 ಕೆಜಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಇಂದಿನಿಂದ 115 ರೂ.ಗಳಷ್ಟು ಇಳಿಕೆಯಾಗಿದೆ.

ಐಒಸಿಎಲ್ ಪ್ರಕಾರ, ನವೆಂಬರ್ 1 ರಿಂದ ದೆಹಲಿಯಲ್ಲಿ 19 ಕೆಜಿ ಇಂಡೇನ್ ವಾಣಿಜ್ಯ ಸಿಲಿಂಡರ್ ಬೆಲೆ 115.5 ರೂ., ಕೋಲ್ಕತಾದಲ್ಲಿ 113 ರೂ., ಮುಂಬೈನಲ್ಲಿ 115.5 ರೂ., ಚೆನ್ನೈನಲ್ಲಿ 116.5 ರೂ. ಇಳಿಕೆಯಾಗಿದೆ. ಇದಕ್ಕೂ ಮೊದಲು ಅಕ್ಟೋಬರ್ 1 ರಂದು, ಈ ಸಿಲಿಂಡರ್ ಬೆಲೆಯನ್ನು 25 ರೂ.ಗಳಷ್ಟು ಕಡಿಮೆ ಮಾಡಲಾಗಿತ್ತು. 14.2 ಕೆಜಿ ತೂಕದ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಹಳೆಯ ಬೆಲೆಯಲ್ಲಿ ಲಭ್ಯವಾಗಲಿದೆ. ದೆಹಲಿಯಲ್ಲಿ 19 ಕೆಜಿ ಇಂಡೇನ್ ಸಿಲಿಂಡರ್ 1859.5 ರೂ.ಗೆ ಬದಲಾಗಿ 1744 ರೂ.ಗೆ ಲಭ್ಯವಾಗಲಿದೆ.

error: Content is protected !!

Join the Group

Join WhatsApp Group