(ನ್ಯೂಸ್ ಕಡಬ) newskadaba.com ನವದೆಹಲಿ, ಅ.19: ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. ಬುಧವಾರದ ವಹಿವಾಟು ಮುಕ್ತಾಯದ ವೇಳೆಗೆ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 82.95ಕ್ಕೆ ಇಳಿಕೆಯಾಗಿದೆ. ಈ ಹಿಂದಿನ ಸೆಷನ್ಗಳಲ್ಲಿ ತುಸು ಗಳಿಕೆ ಕಂಡುಬಂದಿದ್ದರೂ ಕೊನೆಯಲ್ಲಿ ಮೌಲ್ಯ ತೀವ್ರ ಕುಸಿತ ಕಂಡಿತು. ಪರಿಣಾಮವಾಗಿ ಹಣದುಬ್ಬರ ಇನ್ನಷ್ಟು ಏರಿಕೆ, ಕೇಂದ್ರೀಯ ಬ್ಯಾಂಕ್ಗಳಿಂದ ರೆಪೊ ದರ ಹೆಚ್ಚಳ ಸೇರಿದಂತೆ ಇತರ ಕಠಿಣ ಕ್ರಮಗಳನ್ನು ನಿರೀಕ್ಷಿಸಲಾಗಿದೆ.
82.3062ರಲ್ಲಿ ವಹಿವಾಟು ಆರಂಭಿಸಿದ್ದ ರೂಪಾಯಿ ಹಿಂದೆಂದಿಗಿಂತಲೂ ಹೆಚ್ಚಿನ ಕುಸಿತ ದಾಖಲಿಸಿದೆ. 82.36ಕ್ಕೆ ಇಳಿಕೆಯಾಗಿದ್ದು ರೂಪಾಯಿ ಮೌಲ್ಯದ ಈ ಹಿಂದಿನ ಗರಿಷ್ಠ ಕುಸಿತವಾಗಿತ್ತು.