(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 30. ಬೈಕ್ ಹಾಗೂ ಸ್ಕೂಟಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸವಾರರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಅರಂತೋಡು ಬಳಿಯ ಕುಕ್ಕುಂಬಳ ಎಂಬಲ್ಲಿ ನಡೆದಿದೆ.

ಬಾಜಿನಡ್ಕದಿಂದ ಅರಂತೋಡು ಪೇಟೆಗೆ ಬರುತ್ತಿದ್ದ ಐತಪ್ಪ ಬಾಜಿನಡ್ಕರವರ ಸ್ಕೂಟರ್ ಹಾಗೂ ಅರಂತೋಡಿನಿಂದ ಕುಕ್ಕುಂಬಳಕ್ಕೆ ಹೋಗುತ್ತಿದ್ದ ಬೈಕ್ ನಡುವೆ ಪರಸ್ಪರ ಢಿಕ್ಕಿ ಹೊಡೆದಿದೆ. ಪರಿಣಾಮ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎನ್ನಲಾಗಿದೆ.







