ಟ್ಯಾಂಕರ್ ಹಾಗೂ ಸ್ಕೂಟರ್ ನಡುವೆ ಅಪಘಾತ ➤ ಓರ್ವ ಮೃತ್ಯು



(ನ್ಯೂಸ್ ಕಡಬ) newskadaba.com ಕಾಸರಗೋಡು, ಜೂ. 22. ಟ್ಯಾಂಕರ್ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ವಿದ್ಯಾನಗರದಲ್ಲಿನ ಸರ್ಕಾರಿ ಕಾಲೇಜು ಬಳಿ ನಡೆದಿದೆ.







 

ಮೃತ ಸವಾರನನ್ನು ಚಾಲಕ್ಕುಡಿಯ ಎ.ಪಿ ಬಿನೀಶ್ (45) ಎಂದು ಗುರುತಿಸಲಾಗಿದೆ. ಹಾಗೂ ಅವರ ಜೊತೆಗಿದ್ದ ತಮಿಳುನಾಡಿನ ಆನಂದ್ ಕುಮಾರ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆನಂದ್ ಕುಮಾರ್ ರವರು ಚಲಾಯಿಸುತ್ತಿದ್ದ ಬೈಕ್ ಹಾಗೂ ಟ್ಯಾಂಕರ್ ನಡುವೆ ಅಪಘಾತ, ನಡೆದಿದ್ದು ಪರಿಣಾಮ ರಸ್ತೆಗೆಸೆಯಲ್ಪಟ್ಟ ಬಿನೀಶ್ ಅವರನ್ನು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಈ ಕುರಿತು ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.






error: Content is protected !!
Scroll to Top