ಅಡಿಕೆ ಕದಿಯಲು ಮರಗಳನ್ನೇ ಕತ್ತರಿಸಿದ ಕಿಡಿಗೇಡಿಗಳು..!



(ನ್ಯೂಸ್ ಕಡಬ) newskadaba.com ಹಾಸನ, ಜ. 05. ಅಡಿಕೆ ಕಳವಿಗೆ ಬಂದ ದುಷ್ಕರ್ಮಿಗಳು ಅಡಿಕೆ ಮರವನ್ನೇ ಕತ್ತರಿಸಿ ಅಡಿಕೆ ಕದ್ದೊಯ್ದ ಘಟನೆ ಸಕಲೇಶಪುರದಲ್ಲಿ ನಡೆದಿದೆ.





ಸಕಲೇಶಪುರ ರೈಲ್ವೇ ಸೇತುವೆಯ ಸಮೀಪ ಸುಬ್ರಹ್ಮಣ್ಯ ಎಂಬವರಿಗೆ ಸೇರಿದ ಮೂರು ಎಕರೆ ಪ್ರದೇಶದಲ್ಲಿ ಕಾಫಿ ಹಾಗೂ ಅಡಿಕೆ ತೋಟವಿದ್ದು, ಈ ತೋಟಕ್ಕೆ ನುಗ್ಗಿದ ಕಳ್ಳರು ಬೆಳೆದು ನಿಂತಿದ್ದ 15 ಅಡಿಕೆ ಮರಗಳನ್ನು ಕತ್ತರಿಸಿ, ಅಡಿಕೆ ಕದ್ದೊಯ್ದಿದ್ದಾರೆ. ಘಟನೆಯ ಕುರಿತು ಸಕಲೇಶಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top