ಮೊಮ್ಮಗಳ ಶಿಕ್ಷಣಕ್ಕಾಗಿ ಮನೆಯನ್ನೇ ಮಾರಿದ ವೃದ್ದ ಚಾಲಕನಿಗೆ ಹರಿದು ಬಂತು 24 ಲಕ್ಷ ರೂ. ದೇಣಿಗೆ

(ನ್ಯೂಸ್ ಕಡಬ) newskadaba.com ಮುಂಬೈ, ಫೆ. 24. ತನ್ನ ಮೊಮ್ಮಗಳ ಶಿಕ್ಷಣದ ಖರ್ಚು ಭರಿಸುವ ಉದ್ದೇಶದಿಂದ ತನ್ನ ಮನೆಯನ್ನೇ ಮಾರಾಟ ಮಾಡಿದ ಮುಂಬೈ ಆಟೋ ಚಾಲಕರೋರ್ವರಿಗೆ ಕ್ರೌಡ್‍ ಫಂಡಿಂಗ್ ಮೂಲಕ 24 ಲಕ್ಷ ರೂ. ದೇಣಿಗೆ ಹರಿದು ಬಂದಿದೆ.


ಹಿರಿಯ ಆಟೋ ಚಾಲಕ ದೇಸರಾಜ್ ಅವರ ಕಥೆಯನ್ನು ಹ್ಯೂಮನ್ಸ್ ಆಫ್ ಬಾಂಬೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿತ್ತು. ಇದೀಗ ಈ ಪೋಸ್ಟ್ ವೈರಲ್ ಆಗಿದೆ. ಇವರ ಇಬ್ಬರು ಪುತ್ರರ ನಿಧನದ ನಂತರ ಇಬ್ಬರು ಸೊಸೆಯಂದಿರು ಹಾಗೂ ನಾಲ್ಕು ಮೊಮ್ಮಕ್ಕಳನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ಅವರದಾಗಿತ್ತು, ಇದಕ್ಕಾಗಿ ಆದಷ್ಟು ಹೆಚ್ಚು ಸಮಯ ಆಟೋ ಓಡಿಸುತ್ತಿದ್ದ ಅವರು ಗಳಿಸುತ್ತಿದ್ದ ಹೆಚ್ಚಿನ ಆದಾಯ ಅವರ ಮೊಮ್ಮಕ್ಕಳ ಶಿಕ್ಷಣಕ್ಕಾಗಿ ಖರ್ಚಾಗುತ್ತಿತ್ತು. ತಮ್ಮ ಮೊಮ್ಮಗಳಿಗೆ 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಶೇ. 80 ಅಂಕಗಳು ದೊರೆತಾಗ ತಾನು ಪಟ್ಟ ಕಷ್ಟವೆಲ್ಲಾ ಸಾರ್ಥಕವಾಯಿತು ಎಂದು ಹೇಳಿದ್ದಾರೆ. ಮೊಮ್ಮಗಳು ಬಿ.ಎಡ್ ಶಿಕ್ಷಣಕ್ಕಾಗಿ ದಿಲ್ಲಿಗೆ ಹೋಗಲು ಬಯಸಿದ್ದು, ಅಷ್ಟು ಹಣವಿಲ್ಲದೆ ಕೊನೆಗೆ ಆಕೆಯ ಕನಸು ಈಡೇರಿಸಲು ಸ್ವಂತ ಮನೆಯನ್ನೇ ಮಾರಾಟ ಮಾಡಿದ್ದಾರೆ ಎಂದು ಅವರು ವಿವರಿಸಿದ್ದರು.

Also Read  ಮಂಗಳೂರು ಏರ್ಪೋರ್ಟ್ ಗೆ ಬಂದಿಳಿದ ಕೇರಳದ ಪ್ರಯಾಣಿಕನಲ್ಲಿ ಮಂಕಿಫಾಕ್ಸ್ ಪತ್ತೆ ➤ 35 ಮಂದಿಗೆ ಐಸೋಲೇಷನ್..!!

error: Content is protected !!
Scroll to Top