? ನ್ಯಾಯಾಲಯದಿಂದ ಹಿಂತಿರುಗುತ್ತಿದ್ದ ಇಬ್ಬರು ಆರೋಪಿಗಳ ಬರ್ಬರ ಕೊಲೆ..!

(ನ್ಯೂಸ್ ಕಡಬ) newskadaba.com ತಮಿಳುನಾಡು, ಫೆ. 11. ನ್ಯಾಯಾಲಯದಿಂದ ಮನೆಗೆ ಹಿಂದಿರುಗುತ್ತಿದ್ದ ಇಬ್ಬರು ಆರೋಪಿಗಳನ್ನುಗುಂಪೊಂದು ಹತ್ಯೆ ಮಾಡಿರುವ ಘಟನೆ ಈರೋಡ್ ನ ಬೀದಿಯಲ್ಲಿ ನಡೆದಿದೆ.

30 ಮತ್ತು 38 ವರ್ಷ ವಯಸ್ಸಿನ ಇಬ್ಬರು ವ್ಯಕ್ತಿಗಳು ಮಧ್ಯಾಹ್ನ 2 ಗಂಟೆಯ ವೇಳೆಗೆ ವೀರಪ್ಪಚತ್ರಂ ಎಂಬ ಪ್ರದೇಶದ ಕಿರಿದಾದ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸುಮಾರು 7ರಿಂದ 8 ಜನರ ಗ್ಯಾಂಗಗ ಒಂದು ಅವರನ್ನು ತಡೆದು ಆಯುಧಗಳಿಂದ ಹಲ್ಲೆ ನಡೆಸಿ ಕೊಂದು ಹಾಕಿ ಪರಾರಿಯಾಗಿದ್ದಾರೆ. 2018 ರಲ್ಲಿ ವ್ಯಕ್ತಿಯ ಕೊಲೆ ಪ್ರಕರಣದ ಪ್ರಧಾನ ಆರೋಪಿಗಳಾದ ಇವರು ನ್ಯಾಯಾಲಯದಿಂದ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದ್ದು, ಇದು ಈ ಹಿಂದಿನ ಕೊಲೆಗೆ ಪ್ರತೀಕಾರ ತೀರಿಸಿಕೊಂಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

Also Read  ರಸ್ತೆ ಕಾಮಗಾರಿ ವೇಳೆ ಗುಡ್ಡ ಕುಸಿತ ➤ಮೂವರು ಕಾರ್ಮಿಕರ ದುರ್ಮರಣ

error: Content is protected !!
Scroll to Top