ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ರಂಗ ಕಲಾವಿದ ನಾರಾಯಣ ಗಾಣಿಗ ವಿಧಿವಶ

(ನ್ಯೂಸ್ ಕಡಬ) newskadaba.com ಕುಂದಾಪುರ, ಫೆ. 02. ಹಿರಿಯ ಯಕ್ಷಗಾನದ ಸ್ತ್ರೀವೇಷಧಾರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಂಡ್ಸೆ ನಾರಾಯಣ ಗಾಣಿಗ ಎಂಬವರು ಸೋಮವಾರದಂದು ನಿಧನರಾಗಿದ್ದಾರೆ.

ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಕೊಲ್ಲೂರಿನ ವಂಡ್ಸೆ ಗ್ರಾಮದವರಾಗಿದ್ದು, ಸುಮಾರು 28 ವರ್ಷಗಳ ಕಾಲ ಅನೇಕ ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಇನ್ನು ಚಿತ್ರಾಂಗದೆ, ದ್ರೌಪದಿ, ಶಶಿಪ್ರಭೆ, ಮಂಡೋದರಿ, ಮೀನಾಕ್ಷಿ, ತಾರೆ ಮುಂತಾದ ಪಾತ್ರಗಳಲ್ಲಿ ಮಿಂಚಿರುವ ಇವರಿಗೆ 2008ನೇ ಸಾಲಿನಲ್ಲಿ ಯಕ್ಷಗಾನ ಅಕಾಡೆಮಿ ಪುರಸ್ಕಾರ, 2013ರಲ್ಲಿ ಮಕ್ಕಳ ಮೇಳದ ಉಡುಪಿ ಪ್ರಶಸ್ತಿ 2014ರಲ್ಲಿ ಯಕ್ಷ ಮಿತ್ರಕೂಟದ ರಂಗಸ್ಥಳ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

Scroll to Top