60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈ ರಾಜ್ಯದಲ್ಲಿ ಬಿಜೆಪಿಗೆ ಟಿಕೆಟ್ ಸಿಗಲ್ಲ..!

(ನ್ಯೂಸ್ ಕಡಬ) newskadaba.com ಗುಜರಾತ್, ಫೆ. 02. ಬಿಜೆಪಿ ಘಟಕ ಸ್ಥಳೀಯ ಹಾಗೂ ನಾಗರಿಕ ಚುನಾವಣೆಯಲ್ಲಿ ಪಕ್ಷದಿಂದ ನೀಡಲಾಗುವ ಟಿಕೆಟ್ ಪಡೆಯಬೇಕೆಂದರೆ ಕೆಲ ಮಾನದಂಡಗಳನ್ನ ವಿಧಿಸಿದ್ದು, ಇದರನ್ವಯ 60 ವರ್ಷಕ್ಕಿಂತ ಮೇಲ್ಪಟ್ಟವರು, ಮೂರು ಬಾರಿ ಚುನಾವಣೆಯಲ್ಲಿ ಆಯ್ಕೆಯಾದವರು ಹಾಗೂ ರಾಜಕಾರಣಿಗಳ ಸಂಬಂಧಿಗಳಿಗೆ ಬಿಜೆಪಿ ಟಿಕೆಟ್ ಸಿಗೋದಿಲ್ಲ ಎಂದು ಹೇಳಿದೆ. ಈ ಬಗ್ಗೆ ಸ್ವತಃ ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್ ಅಧಿಕೃತ ಮಾಹಿತಿ ನೀಡಿದ್ದಾರೆ.


ಮುಂಬರುವ ಮುನ್ಸಿಪಾಲ್ ಕಾರ್ಪೋರೇಷನ್ ಚುನಾವಣೆ ಸಂಬಂಧ ನಡೆಸಲಾದ ಸಭೆಯಲ್ಲಿ ಬಿಜೆಪಿ ಮುಖಂಡರು ಈ ನಿರ್ಧಾರವನ್ನ ಕೈಗೊಂಡಿದ್ದಾರೆ. ಈ ಸಂದರ್ಭ ಸಿಎಂ ವಿಜಯ್ ರೂಪಾಣಿ ಕೂಡ ಭಾಗಿಯಾಗಿದ್ದರು. ತಾಲೂಕು, ಜಿಲ್ಲೆ, ಮುನ್ಸಿಪಾಲಿಟಿ ಹಾಗೂ ಕಾರ್ಪೋರೇಷನ್ ಚುನಾವಣೆಗೆ ಬಿಜೆಪಿ ಒಟ್ಟು 8 ಸಾವಿರ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಿದೆ ಎಂದು ವರದಿಯಾಗಿದೆ.

Also Read  ಯುವತಿಯ ಅಪಹರಣ ಪ್ರಕರಣ ► ಮುಂಬೈ ಪೊಲೀಸರಿಂದ ಬಜರಂಗ ದಳ ಮುಖಂಡ ಸುನಿಲ್ ಪಂಪ್ ವೆಲ್ ಬಂಧನ

error: Content is protected !!