ಪೊಲಿಯೋ ಬದಲು ಸ್ಯಾನಿಟೈಸರ್ ನೀಡಿದ ಆರೋಗ್ಯ ಸಿಬ್ಬಂದಿ ➤ 12 ಮಕ್ಕಳು ಅಸ್ವಸ್ಥ

(ನ್ಯೂಸ್ ಕಡಬ) newsladaba.com ಮುಂಬೈ, ಫೆ. 02. 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಬದಲಿಗೆ ಸ್ಯಾನಿಟೈಸರ್ ನೀಡಿದ ದುರದೃಷ್ಟಕರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಸ್ಯಾನಿಟೈಸರ್ ನೀಡಿದ್ದರಿಂದಾಗಿ 12 ಮಕ್ಕಳು ಅಸ್ವಸ್ಥರಾಗಿದ್ದು, ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯವತ್ಮಲ್ ಜಿಲ್ಲೆಯ 5 ವರ್ಷದೊಳಗಿನ ಮಕ್ಕಳಿಗೆ ಆರೋಗ್ಯ ಸಿಬ್ಬಂದಿ ಪೋಲಿಯೋ ಲಸಿಕೆ ಹಾಕುವ ಬದಲು ಯಡವಟ್ಟು ಮಾಡಿ ಹ್ಯಾಂಡ್ ಸ್ಯಾನಿಟೈಸರ್ ನೀಡಿದ್ದಾರೆ. ಅಸ್ವಸ್ಥ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನಂತರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಲೋಪವೆಸಗಿದ ಮೂವರು ಆರೋಗ್ಯ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Also Read  ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ- ಸವಾರ ಗಂಭೀರ

error: Content is protected !!
Scroll to Top