ಸಾಲಗಾರರ ಕಿರುಕುಳದಿಂದ ಬೇಸತ್ತು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು..!



(ನ್ಯೂಸ್ ಕಡಬ) newskadaba.com ಬೆಳಗಾವಿ, ಜ. 28. ಸಾಲಗಾರನ ಕಿರುಕುಳ ತಡೆಯಲಾರದೇ ಒಂದೇ ಕುಟುಂಬದ ನಾಲ್ವರು ರೈಲಿನಡಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿದ ಘಟನೆ ರಾಯಬಾಗ ತಾಲೂಕಿನ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.





ಮೃತಪಟ್ಟವರನ್ನು ಸಾತಪ್ಪ ಅಣ್ಣಪ್ಪ ಸುತಾರ(60), ಮಹಾದೇವಿ ಸಾತಪ್ಪ ಸುತಾರ(50), ಸಂತೋಷ್ ಸಾತಪ್ಪ ಸುತಾರ(26) ಹಾಗೂ ದತ್ತಾತ್ರಯ ಸಾತಪ್ಪ ಸುತಾರ(28) ಎಂದು ಗುರುತಿಸಲಾಗಿದೆ. ಮೃತರು ತಂದೆ ಮಾಡಿದ ಸಾಲದಿಂದ ಹಾಗೂ ಸಾಲಗಾರರ ಕಿರುಕುಳ ತಡೆಯಲಾರದೇ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತನಿಖೆಯ ವೇಳೆ ತಿಳಿದುಬಂದಿದೆ. ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






error: Content is protected !!
Scroll to Top