ಪತ್ನಿಯ ಮೇಲಿನ ದ್ವೇಷಕ್ಕೆ 18 ಮಂದಿ ಮಹಿಳೆಯರನ್ನು ಹತ್ಯೆಗೈದ ನರಹಂತಕ..!

(ನ್ಯೂಸ್ ಕಡಬ) newskadaba.com ಹೈದರಾಬಾದ್, ಜ. 27. 18 ಮಹಿಳೆಯರ ಸರಣಿ ಹತ್ಯೆಗೈದ ಆರೋಪದಡಿಯಲ್ಲಿ 45 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಯನ್ನು ಮೈನಾ ರಾಮುಲು ಎಂದು ಗುರುತಿಸಲಾಗಿದೆ. ಈತ ವಿವಾಹವಾದ ಕೆಲವೇ ದಿನಗಳಲ್ಲಿ ಈತನ ಪತ್ನಿ ದೂರವಾಗಿ, ಬೇರೊಬ್ಬನನ್ನು ಮದುವೆಯಾಗಿರುವ ಹಿನ್ನೆಲೆಯಲ್ಲಿ ಆತ ಈ ಕೃತ್ಯ ಎಸಗುತ್ತಿದ್ದನು ಎನ್ನಲಾಗಿದೆ. ಮಹಿಳೆಯರ ಸರಣಿ ಕೊಲೆ ಮಾತ್ರವಲ್ಲದೆ, ಇತರ ಅಪರಾಧ ಚಟುವಟಿಕೆಗಳಲ್ಲೂ ಈತ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ಪತ್ನಿ ಬಿಟ್ಟು ಹೋಗಿದ್ದರಿಂದ ಮಹಿಳೆಯರ ಮೇಲೆ ಈತ ದ್ವೇಷ ಸಾಧಿಸುತ್ತಿದ್ದ ಎಂಬುದು ತನಿಖೆಯ ವೇಳೆ ಗೊತ್ತಾಗಿದೆ ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ರಚಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಶ್ರೀ ಆಂಜನೇಯ ಸ್ವಾಮಿ ಗೆ ಇಷ್ಟವಾದ ಈ 4 ವಸ್ತುಗಳನ್ನು ಅರ್ಪಿಸಿ ನಿಮ್ಮ ಜೀವನದ ಕಷ್ಟಗಳನ್ನು ಪರಿಹರಿಸಿಕೊಳ್ಳಿ

 

error: Content is protected !!
Scroll to Top