ಇಲೆಕ್ಟ್ರಿಕ್ ಕೇಬಲ್ ತಾಗಿ ಬೆಂಕಿಗಾಹುತಿಯಾದ ಬಸ್..! ➤ 6 ಮಂದಿ ಸಹೀವ ದಹನ

(ನ್ಯೂಸ್ ಕಡಬ) newskadaba.com ಜೈಪುರ, ಜ. 17. ಬಸ್ ಗೆ ಇಲೆಕ್ಟ್ರಿಕಲ್ ಕೇಬಲ್ ತಾಗಿದ ಪರಿಣಾಮ ಬಸ್ ಬೆಂಕಿಗಾಹುತಿಯಾಗಿ ಆರು ಮಂದಿ ಸಜೀವ ದಹನವಾದ ಘಟನೆ ರಾಜಸ್ಥಾನದ ಜಾಲೋರ್ ಎಂಬಲ್ಲಿ ನಡೆದಿದೆ.

ಖಾಸಗಿ ಬಸ್ ಮಂಡೋರ್ ನಿಂದ ಬ್ಯಾವರ್ ಎಂಬಲ್ಲಿಗೆ ಹೋಗುತಿದ್ದ ವೇಳೆ ಮಹೇಶ್ ಪುರ ಗ್ರಾಮದ ಬಳಿ ಬಸ್ ನಿಲುಗಡೆ ಮಾಡಲಾಗಿತ್ತು. ಈ ಸಂದರ್ಭ ಬಸ್ ನ ಮೇಲ್ಭಾಗ ಎಲೆಕ್ಟ್ರಿಕ್ ಕೇಬಲ್ ಗೆ ತಾಗಿತ್ತು, ಇದು ಚಾಲಕನ ಗಮನಕ್ಕೆ ಬಂದಿರಲಿಲ್ಲ. ಈ ಕೇಬಲ್ ನಲ್ಲಿ ವಿದ್ಯುತ್ ಪ್ರಸರಣವಾಗುತ್ತಿದ್ದುದರಿಂದ ಅದು ಬಸ್ ಗೆ ತಗುಲಿ, ಒಮ್ಮೆಲೆ ಬೆಂಕಿ ಹೊತ್ತಿಕೊಂಡಿದೆ. ಬಸ್ ನಲ್ಲಿದ್ದ ಸುಮಾರು 40 ಮಂದಿ ಪ್ರಯಾಣಿಕರಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಎಲ್ಲರೂ ಒಳಗಡೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ, ಆಗಲೇ ಆರು ಮಂದಿ ದಹಿಸಿ ಹೋಗಿ, 19 ಮಂದಿಗೆ ಗಂಭೀರ ಗಾಯಗಳಾಗಿದ್ದವು. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Also Read  ನೇತ್ರಾವದಿ ನದಿಯಲ್ಲಿ ಮುಳುಗಿ ಆರ್‌ಎಸ್‌ಎಸ್‌ ಕಾರ್ಯಕರ್ತ ಮೃತ್ಯು..!

error: Content is protected !!
Scroll to Top