ಕಾಸರಗೋಡು: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಕಾಸರಗೋಡು, . 15. ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯೋರ್ವನನ್ನು ಪಯ್ಯನ್ನೂರು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಯನ್ನು ಮಂಗಲ್ಪಾಡಿ ಚುಕ್ರಿಯಡ್ಕದ ಅಬ್ದುಲ್ ಫಯಾಜ್ (22) ಎಂದು ಗುರುತಿಸಲಾಗಿದೆ. ಈತ ಆಟೋರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ಸಂಶಯಗೊಂಡ ಅಬಕಾರಿ ದಳದ ಸಿಬ್ಬಂದಿಗಳು ತಪಾಸಣೆಗೊಳಪಡಿಸಿದಾಗ ಈತನ ಬಳಿ 128 ಗ್ರಾಂ ಗಾಂಜಾ ಪತ್ತೆಯಾಗಿದೆ. ಈತನ ಜೊತೆಗಿದ್ದ ಮತ್ತೋರ್ವ ನೌಫಾಲ್ ಎಂಬಾತ ಪರಾರಿಯಾಗಾಗಿದ್ದಾನೆ.

Also Read  ಮಾರಕಾಸ್ತ್ರದಿಂದ ಮಗನನ್ನೇ ಕೊಚ್ಚಿ ಕೊಂದ ಪಾಪಿ ತಂದೆ

 

error: Content is protected !!
Scroll to Top