ಪುತ್ತೂರು: ವಿದ್ಯುತ್ ಶಾಕ್ ತಗುಲಿ ಮೆಕ್ಯಾನಿಕ್ ಮೃತ್ಯು ➤ ತನ್ನ ಗೃಹಪ್ರವೇಶಕ್ಕೆ ಎರಡು ದಿನ ಬಾಕಿ ಇರುವಾಗಲೇ ವಿದ್ಯುತ್ ಆಘಾತ



(ನ್ಯೂಸ್ ಕಡಬ) newskadaba.com ಪುತ್ತೂರು, ಜ.14. ತನ್ನ ಗೃಹಪ್ರವೇಶಕ್ಕೆ ಎರಡು ದಿನವಿದ್ದಾಗಲೇ ಮೆಕ್ಯಾನಿಕ್ ಓರ್ವರು ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ಘಟನೆ ಗುರುವಾರ ಸಂಜೆ ಪುತ್ತೂರಿನಲ್ಲಿ ನಡೆದಿದೆ.





ಮೃತ ಮೆಕ್ಯಾನಿಕ್ ನನ್ನು ಸಂಪ್ಯ ಉದಯ ಗಿರಿ ನಿವಾಸಿ ವೆಂಕಪ್ಪ ನಾಯ್ಕ್ ಎಂಬವರ ಪುತ್ರ ಕೃಷ್ಣಪ್ಪ ನಾಯ್ಕ್(45) ಎಂದು ಗುರುತಿಸಲಾಗಿದೆ. ಕೃಷ್ಣಪ್ಪರವರು ನೂತನ ಮನೆ ಕಟ್ಟಿಸಿದ್ದು, ಶನಿವಾರದಂದು ಗೃಹಪ್ರವೇಶವಿದ್ದ ಹಿನ್ನೆಲೆಯಲ್ಲಿ ಮನೆಯಲ್ಲಿ ಹೊಸ ಪ್ಲಗ್ ಸಿಕ್ಕಿಸುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಶಾಕ್ ತಗುಲಿದೆ ಎನ್ನಲಾಗಿದೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಮೃತಪಟ್ಟಿದ್ದರು. ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






error: Content is protected !!
Scroll to Top