ದುಬೈನಿಂದ ಸುಮಾರು 85 ಲಕ್ಷ ರೂ ಮೌಲ್ಯದ ಅಕ್ರಮ ಚಿನ್ನ ಹಾಗೂ ಸರಕು ಸಾಗಾಟ ➤ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಚೆನ್ನೈ, ಜ. 14. ಕಸ್ಟಮ್ಸ್ ವಿಭಾಗದ ಅಧಿಕಾರಿಗಳು ಇಬ್ಬರು ಪ್ರಯಾಣಿಕರನ್ನು ಬಂಧಿಸಿ ಅವರಿಂದ ಸುಮಾರು 85 ಲಕ್ಷ ರೂ. ಮೌಲ್ಯದ ಸರಕುಗಳನ್ನು ವಶಕ್ಕೆ ಪಡೆದ ಘಟನೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ದುಬೈನಿಂದ ಆಗಮಿಸಿದ ಇಬ್ಬರು ಪ್ಯಾಣಿಕರಿಂದ ಈ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವರಿಬ್ಬರೂ ಕೂಡಾ ಗುದನಾಳದಲ್ಲಿ ಗೋಲ್ಡ್ ಪೇಸ್ಟ್ ಸಾಗಿಸುತ್ತಿರುವುದು ಪತ್ತೆಯಾಗಿದೆ. ಹಾಗೂ ಲಗೇಜ್ ತಪಾಸಣೆಯ ವೇಳೆ 72.6 ಲಕ್ಷ ರೂ ಮೌಲ್ಯದ 1.42 ಕೆಜಿ ಚಿನ್ನ, 12.4 ಲಕ್ಷದ ಸಿಗರೇಟ್, ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಹಾಗೂ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.

Also Read  ರೈಲು ಹಳಿ ಮೇಲೆ ಕಬ್ಬಿಣದ ರಾಡ್‌ ಪತ್ತೆ

error: Content is protected !!
Scroll to Top