ಹಳ್ಳಕ್ಕೆ ಬಿದ್ದ ಟೆಂಪೋ ಟ್ರಾವೆಲ್ಲರ್ ➤ ಮೂವರ ದುರ್ಮರಣ

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಜ. 08. ಟೆಂಪೊವೊಂದು ರಸ್ತೆ ಬದಿಯ ಹಳ್ಳಕ್ಕೆ ಬಿದ್ದ ಪರಿಣಾಮ ಮೂವರು ಮೃತಪಟ್ಟ ಘಟನ ತಾಲೂಕಿನ ಸುವರ್ಣಾವತಿ ಜಲಾಶಯದ ಸಮೀಪ ನಡೆದಿದೆ.

ಮೃತಪಟ್ಟವರನ್ನು ಸುಬ್ರಹ್ಮಣ್ಯ, ಅಮರಾವತಿ ಹಾಗೂ ಕೋಕಿಲಾ ಎಂದು ಗುರುತಿಸಲಾಗಿದೆ. ಟಿಟಿ ವಾಹನವು ತಮಿಳುನಾಡಿನ ತಿರುಪೂರ್ ನಿಂದ ಮೈಸೂರಿಗೆ ತೆರಳುತ್ತಿದ್ದು ಈ ವೇಳೆ ದುರ್ಘಟನೆ ಸಂಭವಿಸಿದೆ.

Scroll to Top