ಕಾಸರಗೋಡು: ಆಟೋ ರಿಕ್ಷಾ ಮಗುಚಿ ಮಗು ಮೃತ್ಯು



(ನ್ಯೂಸ್ ಕಡಬ) newskadaba.com ಕಾಸರಗೋಡು, . 04. ಆಟೋ ರಿಕ್ಷಾವೊಂದು ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಮಗುವೊಂದು ಮೃತಪಟ್ಟ ಘಟನೆ ಇಂದು ಸಂಜೆ ಬಂದ್ಯೋಡು- ಪೆರ್ಮುದೆ ರಸ್ತೆಯ ಮೀಪಿರಿ ಎಂಬಲ್ಲಿ ನಡೆದಿದೆ.





 

ಮೃತಪಟ್ಟ ಮಗುವನ್ನು ಕಯ್ಯಾರ್ ಪಿಲಿಯಂದೂರಿನ ರಿಜ್ವಾನ್ ಎಂದು ಗುರುತಿಸಲಾಗಿದೆ. ತಾಯಿ ಹಾಗೂ ಮಗು ಬಂದ್ಯೋಡು ಕಡೆಗೆ ರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ಆಟೋ ರಿಕ್ಷಾದ ಟಯರ್ ಕಳಚಿದ ಪರಿಣಾಮ ಆಟೋ ಮಗುಚಿ ಬಿದ್ದಿದ್ದು ಗಂಭೀರ ಗಾಯಗೊಂಡ ಮಗು ಮೃತಪಟ್ಟಿದೆ. ತಾಯಿ ಫಾಯಿಸಾ ಮತ್ತು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಘಟನೆಯ ಕುರಿತು ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






 

error: Content is protected !!
Scroll to Top