ಕೃಷಿ ಕಾನೂನು ವಿರೋಧಿಸಿ ಮುಂದುವರಿದ ರೈತರ ಪ್ರತಿಭಟನೆ ➤ ಮತ್ತೆ ಮೂವರು ಮೃತ್ಯು

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 04.  ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ  ದೆಹಲಿಯಲ್ಲಿ ಮುಂದುವರಿದ ರೈತರ ಪ್ರತಿಭಟನೆಯಲ್ಲಿ ಹಲವರು ಮೃತಪಟ್ಟಿದ್ದು, ಭಾನುವಾರದಂದು ಮಧ್ಯರಾತ್ರಿ ಮತ್ತೆ ಮೂರು ರೈತರು ಮೃತಪಟ್ಟಿರುವ ಘಟನೆ ನಡೆದಿವೆ.

ಓರ್ವ ರೈತ ಹೃದಯಸ್ತಂಭನದಿಂದ ಮೃತಪಟ್ಟರೆ, ಮತ್ತೋರ್ವರರು  ಜ್ವರದಿಂದ ಬಳಲಿ ಮೃತಪಟ್ಟಿದ್ದು, ಮತ್ತೋರ್ವ ರೈತನ ಸಾವಿಗೆ ಕಾರಣ ಮರಣೋತ್ತರ ವರದಿ ಬಳಿಕವಷ್ಟೇ ತಿಳಿದುಬರಬೇಕಿದೆ. ಪಂಜಾಬ್ ನ ಸಂಗ್ರುರ್ ಜಿಲ್ಲೆಯ ಲಿಧ್ರಾ ಗ್ರಾಮದ ಶಮ್ಶೀರ್ ಸಿಂಗ್ (45) ಪಂಜಾಬ್ ನ ಬಥಿಂದಾ ಜಿಲ್ಲೆಯ ಚೌಕೆ ಗ್ರಾಮದ ಜಶನ್ದೀಪ್ ಸಿಂಗ್ (18) ಹರ್ಯಾಣದ ಜಗ್ಬೀರ್ ಸಿಂಗ್ (60) ಮೃತ ರೈತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Also Read  15 ನೇ ವಯಸ್ಸಿಗೆ ಮನೆ ಖರೀದಿಸಿದ ಬಾಲನಟಿ ರುಹಾನಿಕಾ ಧಮನ್...!

error: Content is protected !!
Scroll to Top