ಚಲಿಸುತ್ತಿದ್ದ ರೈಲಿನಲ್ಲಿ ಯುವತಿಯ ಅತ್ಯಾಚಾರಕ್ಕೆ ಯತ್ನಿಸಿದ ಕಾಮಪಿಶಾಚಿ

(ನ್ಯೂಸ್ ಕಡಬ) newskadaba.com ಮುಂಬೈ, ಜ. 03. ಚಲಿಸುತ್ತಿದ್ದ ರೈಲಿನಲ್ಲಿ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಮುಂಬೈ ಸಮೀಪದ ವಡಾಲದಲ್ಲಿ ನಡೆದಿದೆ.


ಪ್ರಿಯಕರನನ್ನು ಭೇಟಿ ಮಾಡಲೆಂದು ಯುವತಿಯೋರ್ವಳು ಮುಂಜಾನೆ ನಾಲ್ಕು ಗಂಟೆಯ ರೈಲಿನಲ್ಲಿ ಸಂಚರಿಸುತ್ತಿದ್ದ ವೇಳೆ ಮಹಿಳೆಯರ ಬೋಗಿಯಲ್ಲಿ ಒಬ್ಬಳೇ ಇರುವುದನ್ನು ಕಂಡ ಕಿರಾತಕ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದರಿಂದ ತಪ್ಪಿಸಿಕೊಳ್ಳಲು ಯುವತಿಯು ಪ್ರಯತ್ನಿಸಿದಾಗ ಸಿಟ್ಟಿಗೆದ್ದ ಕಿರಾತಕ ಆಕೆಯನ್ನು ರೈಲಿನಿಂದ ಹೊರದಬ್ಬಿ ಪರಾರಿಯಾಗಿದ್ದಾನೆ. ಯುವತಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ದುಷ್ಕರ್ಮಿಯ ಬಂದನಕ್ಕೆ ತನಿಖೆ ಮುಂದುವರಿದಿದೆ.

Also Read  ಪುತ್ತೂರು: ಅಟೋರಿಕ್ಷಾದಲ್ಲಿ ಮಹಿಳೆಯ ಮೇಲೆ ಕೈ ಹಾಕಿದ ಆರೋಪ ➤ ಯುವಕನಿಗೆ ಸಾರ್ವಜನಿಕರಿಂದ ಗೂಸಾ

error: Content is protected !!
Scroll to Top