ಕಾಸರಗೋಡು: 2 ದಿನಗಳ ಹಿಂದೆ ಕಳವಾಗಿದ್ದ ಶ್ರೀಗಂಧದ ಕೊರಡುಗಳು ಮತ್ತೆ ಅದೇ ಸ್ಥಳದಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಕಾಸರಗೋಡು, . 22. ಮಸೀದಿ ಆವರಣದಲ್ಲಿದ್ದ ಶ್ರೀಗಂಧ ಮರದ ಕೊರಡುಗಳನ್ನು ಯಾರೋ ಕಳವುಗೈದಿದ್ದು, ಇದೀಗ ಎರಡು ದಿನಗಳ ಬಳಿಕ  ಅದೇ ಸ್ಥಳದಲ್ಲಿ ಪತ್ತೆಯಾದ ಘಟನೆ ಮುಳಿಯಾರಿನ ಬಾವಿಕ್ಕರೆ ಎಂಬಲ್ಲಿ ನಡೆದಿದೆ.

ಶ್ರೀಗಂಧದ ಕೊರಡನ್ನು ಕಳವುಗೈದ ಬಗ್ಗೆ ಅರಣ್ಯಾಧಿಕಾರಿಗಳು ತನಿಖೆ ನಡೆಸುತ್ತಿದ್ದಂತೆಯೇ ಕಳ್ಳರು ಕೊರಡುಗಳನ್ನು ಮಸೀದಿ ಆವರಣದಲ್ಲಿ ತಂದಿಟ್ಟು ಪರಾರಿಯಾಗಿದ್ದಾರೆ. ಬಾವಿಕ್ಕರೆ ಜುಮಾ ಮಸೀದಿ ಆವರಣದಲ್ಲಿದ್ದ ಸುಮಾರು 16 ವರ್ಷ ಹಳೆಯ ಮರವನ್ನು ಎರಡು ದಿನಗಳ ಹಿಂದೆ ಕಳವು ಮಾಡಲಾಗಿತ್ತು. ಆದಿತ್ಯವಾರದಂದು ಮಸೀದಿಯ ಪರಿಸರವನ್ನು ಸ್ವಚ್ಛಗೊಳಿಸಿದ್ದು, ಬಳಿಕ ಸೋಮವಾರ ಬೆಳಿಗ್ಗೆ  ಶ್ರೀಗಂಧದ ಮರವನ್ನು ಕಳವುಗೈಯಲಾಗಿತ್ತು. ಈ ಬಗ್ಗೆ ತನಿಖೆ ಮುಂದುವರಿದಿತ್ತು. ಈ ನಡುವೆ ಮಸೀದಿ ಆವರಣದಲ್ಲಿ ಗೋಣಿ ಚೀಲದಲ್ಲಿ ಸುಮಾರು 18 ಕಿಲೋ ಶ್ರೀಗಂಧ ಪತ್ತೆಯಾಗಿದೆ.

Also Read  18ನೇ ಕಂತಿನ ಪಿಎಂ ಕಿಸಾನ್ ಸಮ್ಮನ್ ಯೋಜನೆಯ 20 ಕೋಟಿ ರೂ ಬಿಡುಗಡೆ: ಮೋದಿ

 

error: Content is protected !!
Scroll to Top