ರಸ್ತೆ ಬದಿ ನಿಲ್ಲಿಸಿದ್ದ ಬೆಳಿಗ್ಗೆ ಖರೀದಿಸಿದ ಕಾರು ➤ ತಡರಾತ್ರಿ ಬೃಹತ್ ಮರ ಬಿದ್ದು ಕಾರು ಜಖಂ



(ನ್ಯೂಸ್ ಕಡಬ) newskadaba.com ಕಡಬ, ಅ.16. ರಸ್ತೆ ಬದಿಯ ಗ್ಯಾರೇಜ್ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಕಾರೊಂದರ ಮೇಲೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಣಾಮ ಕಾರು ಜಖಂಗೊಂಡ ಘಟನೆ ಗುರುವಾರ ತಡರಾತ್ರಿ ಕಡಬ ಸಮೀಪದ ಪಂಜ ಎಂಬಲ್ಲಿ ನಡೆದಿದೆ.





ಮಾರುತಿ ಎಸ್ಟೀಮ್ ಕಾರೊಂದನ್ನು ಪಂಜ ಸಿ.ಎ. ಬ್ಯಾಂಕ್ ಸಮೀಪದ ಮಾರುತಿ ಗ್ಯಾರೇಜ್ ಬಳಿ ರಸ್ತೆ ಬದಿ ನಿಲ್ಲಿಸಲಾಗಿದ್ದು, ಗುರುವಾರ ತಡರಾತ್ರಿ ಬೃಹತ್ ಗಾತ್ರದ ಮರವೊಂದು ಕಾರಿನ ಮೇಲೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಗುರುವಾರ ಬೆಳಿಗ್ಗೆಯಷ್ಟೇ ಈ ಕಾರನ್ನು ಪಂಜದ ವ್ಯಕ್ತಿಯೋರ್ವರು ಖರೀದಿಸಿದ್ದಾರೆ ಎನ್ನಲಾಗಿದ್ದು, ಕಾರನ್ನು ಖರೀದಿಸಿ ದಿನಪೂರ್ತಿ ಆಗುವುದರ ಒಳಗೆ ಕಾರಿನ ಮೇಲೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ.






error: Content is protected !!
Scroll to Top