ಪ್ರೀತಿ ನಿರಾಕರಿಸಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರೇಮಿ.!

 (ನ್ಯೂಸ್ ಕಡಬ) newskadaba.com ಹೈದರಾಬಾದ್, ಅ. 13: ಪ್ರೀತಿ ನಿರಾಕರಿಸಿದ್ದ ನರ್ಸ್ ಮೇಲೆ ಪಾಗಲ್ ಪ್ರೇಮಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ದಾರುಣ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

 

ಹನುಮಾನ್ ಪೇಟೆಯಲ್ಲಿ ನಾಗಭೂಷಣ್ ಎಂಬ ಪಾಗಲ್ ಪ್ರೇಮಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಚಿನ್ನಾರಿ ಎಂಬ ಯುವತಿಯನ್ನು ಪ್ರೀತಿಸುವಂತೆ ಹಲವು ದಿನಗಳಿಂದ ಪೀಡಿಸುತ್ತಿದ್ದ. ಆದರೆ ಯುವತಿ ಒಪ್ಪಿರಲಿಲ್ಲ. ನಾಗಭೂಷಣ್ ಕಾಟ ತಡೆಯಲಾಗದೇ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಪೊಲೀಸರು ನಾಗಭೂಷಣ್ ಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು.ಅಕ್ಟೋಬರ್ 12ರ ರಾತ್ರಿ ಈ ಪಾಗಲ್ ಪ್ರೇಮಿ ಯುವತಿಯ ಜೊತೆ ಮಾತಾಡಬೇಕೆಂದು ಆಕೆಯ ಮನೆಗೆ ಹೋಗಿದ್ದಾನೆ. ಈ ವೇಳೆ ಯುವತಿ‌ ಆತನೊಂದಿಗೆ ಮಾತನಾಡಲು ಒಪ್ಪದಿದ್ದಾಗ, ಜೊತೆಯಲ್ಲೇ ತಂದಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ಧಿಡೀರನೆ ಹೊತ್ತಿಕೊಂಡಿದೆ. ಅಗ್ನಿ ಸ್ಪರ್ಶವಾಗಿ ಯುವತಿ ಸಜೀವ ದಹನವಾಗಿದ್ದಾಳೆ.

Also Read  ನ.12ರಂದು ಜಿಲ್ಲಾ ಬಾಲಭವನದಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳು

 

error: Content is protected !!
Scroll to Top