(ನ್ಯೂಸ್ ಕಡಬ) newskadaba.com ದೆಹಲಿ , ಅ. 08: ದೇಶದಲ್ಲಿ ಒಟ್ಟು 24 ವಿಶ್ವವಿದ್ಯಾಲಯಗಳು ನಕಲಿ ಎಂದು ಯುಜಿಸಿ ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿರುವ ಹೆಚ್ಚಿನ ʼವಿಶ್ವವಿದ್ಯಾಲಯʼಗಳು ಉತ್ತರ ಪ್ರದೇಶ ಮತ್ತು ದೆಹಲಿ ಮೂಲದವು.
“ಯುಜಿಸಿ ಕಾಯ್ದೆಗೆ ವಿರುದ್ದವಾಗಿ ಕಾರ್ಯಚರಿಸುತ್ತಿದ್ದ ಒಟ್ಟು 24 ವಿಶ್ವವಿದ್ಯಾಲಯಗಳನ್ನು ಸದ್ಯಕ್ಕೆ ಗುರುತಿಸಲಾಗಿದೆ. ಇವುಗಳನ್ನು ನಕಲಿ ಎಂದು ಪರಿಗಣಿಸಿ, ಇವುಗಳ ಯಾವುದೇ ಪದವಿ ಪ್ರಮಾಣಪತ್ರವನ್ನು ನೀಡುವ ಅಧಿಕಾರವಿರುವುದಿಲ್ಲ,” ಎಂದು ಯುಜಿಸಿ ಸೆಕ್ರೆಟರಿ ರಜನೀಶ್ ಜೈನ್ ಹೇಳಿದ್ದಾರೆ.ವಾರಣಾಸೇಯ ಸಂಸ್ಕೃತ ವಿಶ್ವವಿದ್ಯಾಲಯ, ವಾರಣಾಸಿ, ಮಹಿಳಾ ಗ್ರಾಮ ವಿದ್ಯಾಪೀಠ, ಅಲಹಾಬಾದ್, ಗಾಂಧಿ ಹಿಂದಿ ವಿದ್ಯಾಪೀಠ, ಅಲಹಾಬಾದ್, ನ್ಯಾಷನಲ್ ಯುನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪಥಿ, ಕಾನ್ಪುರ್, ನೇತಾಜಿ ಸುಭಾಷ್ ಚಂದ್ರ ಬೋಸ್ ಮುಕ್ತ ವಿಶ್ವವಿದ್ಯಾಲಯ, ಆಲಿಘಡ್, ಉತ್ತರ ಪ್ರದೇಶ ವಿಶ್ವವಿದ್ಯಾಲಯ, ಮಥುರಾ, ಮಹಾರಾಣಾ ಪ್ರತಾಪ್ ಶಿಕ್ಷಾ ನಿಕೇತನ್ ವಿಶ್ವ ವಿದ್ಯಾಲಯ, ಪ್ರತಾಪ್‌ಘಡ ಅಮತ್ತು ಇಂದ್ರಪ್ರಸ್ಥ ಶಿಕ್ಷಾ ಪರಿಷದ್, ನೋಯ್ಡಾ.
ದೆಹಲಿಯಲ್ಲಿರುವ ಎಂಟು ನಕಲಿ ಯೂನಿವರ್ಸಿಟಿಗಳಂದರೆ, ಕಮರ್ಷಿಯಲ್ ಯೂನಿವರ್ಸಿಟಿ ಲಿಮಿಟೆಡ್, ಯುನೈಟೆಡ್ ನೇಷನ್ಸ್ ಯೂನಿವರ್ಸಿಟಿ, ವೊಕೇಷನಲ್ ಯೂನಿವರ್ಸಿಟಿ, ಎಟಿಆರ್ ಸೆಂಟ್ರಿಕ್ ಜ್ಯೂರಿಡೀಶಿಯಲ್ ಯೂನಿವರ್ಸಿಟಿ, ಇಂಡಿಯನ್ ಇನ್ಸ್ಟಿಟ್ಯೂಷನ್ ಆಫ್ ಸೈನ್ಸ್ ಆಂಡ್ ಎಂಜಿನಿಯರಿಂಗ್, ವಿಶ್ವಕರ್ಮ ಮುಕ್ತ ವಿದ್ಯಾಲಯ ಮತ್ತು ಆಧ್ಯಾತ್ಮಿಕ ವಿಶ್ವವಿದ್ಯಾಲಯ.
ಕರ್ನಾಟಕ, ಕೇರಳ, ಮಹಾರಾಷ್ಟ್ರ ಆಂಧ್ರ ಪ್ರದೇಶ ಮತ್ತು ಪುದುಚೆರಿಯಲ್ಲಿ ತಲಾ ಒಂದು ನಕಲಿ ವಿಶ್ವವಿದ್ಯಾಲಯಗಳು ಇವೆ ಎಂದು ಯುಜಿಸಿ ಹೇಳಿದೆ. ಶ್ರೀಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಪುದುಚೆರಿ, ಕ್ರೈಸ್ಟ್ ನ್ಯೂ ಟೆಸ್ಟಮೆಂಟ್ ಡೀಮ್ಡ್ ಯೂನಿವರ್ಸಿಟಿ, ಆಂಧ್ರ ಪ್ರದೇಶ, ರಾಜಾ ಅರೇಬಿಕ್ ಯೂನಿವರ್ಸಿಟಿ, ನಾಗ್ಪುರ್, ಸೈಂಟ್ ಜಾನ್ಸ್ ಯೂನಿವರ್ಸಿಟಿ, ಕೇರಳ ಮತ್ತು ಬಡಗಾನ್ವಿ ಸರ್ಕಾರ್ ವರ್ಲ್ಡ್ ಓಪನ್ ಯೂನಿವರ್ಸಿಟಿ ಎಜುಕೇಶನ್ ಸೊಸೈಟಿ ಕರ್ನಾಟಕ ,ಎಂದು ನಕಲಿ ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ ಯುಜಿಸಿ ಮಾಡಿದೆ.