(ನ್ಯೂಸ್ ಕಡಬ) newskadaba.com ಚೆನ್ನೈ, ಅ. 08 : ಅಕ್ರಮ ಆಸ್ತಿಗಳಿಕೆ ಕೇಸ್‍ನಲ್ಲಿ ಕಳೆದ ಮೂರೂವರೆ ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಲ್ಲಿರುವ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್‍ಗೆ ಆದಾಯ ತೆರಿಗೆ ಇಲಾಖೆ ಬಿಗ್ ಶಾಕ್ ನೀಡಿದೆ.ಶಶಿಕಲಾಗೆ ಸಂಬಂಧಿಸಿದ 2000 ಕೋಟಿ ಮೌಲ್ಯದ ಆಸ್ತಿಯನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಇಳವರಸಿ, ಸುಧಾಕರನ್‍ಗೆ ಸೇರಿದ ಆಸ್ತಿಗಳನ್ನು ಸೀಜ್ ಮಾಡಲಾಗಿದೆ. ಸಿರುತ್ತಾವೂರ್, ಕೊಡನಾಡಿನಲ್ಲಿರುವ 300 ಕೋಟಿ ಮೌಲ್ಯದ ಆಸ್ತಿಯೂ ಇದ್ರಲ್ಲಿ ಸೇರಿದೆ. ಈ ಸಂಬಂಧ ಪ್ರಕಟಣೆ ಬಿಡುಗಡೆ ಮಾಡಿರುವ ಐಟಿ ಇಲಾಖೆ, ಜಯಲಲಿತಾ ಆಪ್ತೆ ಶಶಿಕಲಾ ಅವರಿಗೆ ಸೇರಿದ್ದ 2 ಸಾವಿರ ಕೋಟಿ ರೂ. ಮೌಲ್ಯಸ ಆಸ್ತಿ ಮಾಡಿಕೊಂಡಿರುವುದಾಗಿ ತಿಳಿಸಿದೆ.