ಗೋಕರ್ಣದಲ್ಲಿ ಹೊಂಡಕ್ಕೆ ಬಿದ್ದ ಕಾರು ➤ ಓರ್ವ ಮೃತ್ಯು..!!

(ನ್ಯೂಸ್ ಕಡಬ) newskadaba.com ಗೋಕರ್ಣ, .01:  ಗೋಕರ್ಣದಲ್ಲಿ  ಕಾರು‌ ಚಾಲಕನ ನಿಯಂತ್ರಣ ‌ತಪ್ಪಿ ಹೊಂಡಕ್ಕೆ ಬಿದ್ದ ಘಟನೆ ಗೋಕರ್ಣದ ಚೌಡಗೇರಿಯಲ್ಲಿ ನಡೆದಿದೆ. ಗೌರವ ದೇವರಾಯ ಗೋಳಿಕಟ್ಟೆ (25) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

 

 

ಕಾರಿನಲ್ಲಿದ್ದ ಇನ್ನೂ ಮೂವರು ಗಾಯಗೊಂಡಿದ್ದಾರೆ. ವರುಣ, ಹನಿಶ, ಹಾಗೂ ರಜತ ನಾಯಕ ಗಾಯಗೊಂಡವರು.ಬುಧವಾರ ಮಧ್ಯರಾತ್ರಿ ನಾಲ್ವರು ಕಾರಿನಲ್ಲಿ ತೆರಳುತ್ತಿದ್ದಾಗ ಚೌಡಗೇರಿ ಬಳಿ ತಿರುವಿನಲ್ಲಿ ಕಾರು ನಿಯಂತ್ರಣ ತಪ್ಪಿ 10 ಅಡಿ ಎತ್ತರಕ್ಕೆ ಜಿಗಿದು ಹೊಂಡಕ್ಕೆ ಬಿದ್ದಿದರಿಂದ ಈ ಅವಘಡ ಸಂಭವಿಸಿದೆ. ಗೋಕರ್ಣ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರನ್ನ ಮೇಲಕ್ಕೆತ್ತಿದ್ದಾರೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Scroll to Top