ಈಜಲು ತೆರಳಿದ್ದ ಮೂವರಲ್ಲಿ ಓರ್ವ ಮೃತ್ಯು ➤ ಇಬ್ಬರ ರಕ್ಷಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 06. ಈಜಲು ಹೋದ ಮೂರು ಮಂದಿಯಲ್ಲಿ ಓರ್ವ ಮೃತಪಟ್ಟು, ಇಬ್ಬರನ್ನು ರಕ್ಷಣೆ ಮಾಡಿದ ಘಟನೆ ಕಿನ್ನಿಗೋಳಿಯ ಶಾಂಭವಿ ನದಿಯಲ್ಲಿ ನಡೆದಿದೆ.

ಮೃತರನ್ನು ಅನಿಲ್ ಕುಮಾರ್ (೩೨) ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಬಂದಿದ್ದ ಏಳು ಜನರಲ್ಲಿ ಮೂವರು ಸ್ನಾನಕ್ಕೆಂದು ಈಜಲು ಇಳಿದಿದ್ದು, ಈ ಸಂದರ್ಭ ಅವರು ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

Scroll to Top