ಪೆಟ್ರೋಲ್ ಬೆಲೆಯಲ್ಲಿ ಭಾರೀ ಇಳಿಕೆ ► 40 ರೂ.ಗಳಿಗೆ ಇಳಿಯಲಿದೆ ಪೆಟ್ರೋಲ್ ಬೆಲೆ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.18. ಪೆಟ್ರೋಲ್ ಡೀಸೆಲ್ ದರವನ್ನು‌ ಜಿಎಸ್ಟಿ ಅಡಿಗೆ ತರುವ ಮೂಲಕ ಭಾರಿ ಪ್ರಮಾಣದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ಇಳಿಕೆಯಾಗಲಿದೆ.

ಏಕೆಂದರೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಈಗ ವಿಧಿಸುತ್ತಿರುವ ವ್ಯಾಟ್‌ ಸೇರಿದಂತೆ ಬಹುತೇಕ ಎಲ್ಲ ತೆರಿಗೆಗಳು ರದ್ದಾಗಲಿವೆ. ಪ್ರಸ್ತುತ ಶೇ.70ರಷ್ಟು ಪಾಲು ವಿವಿಧ ರೀತಿಯ ಕೇಂದ್ರ ಮತ್ತು ರಾಜ್ಯ ತೆರಿಗೆಗಳನ್ನು ವಿಧಿಸಲಾಗುತ್ತಿದ್ದು, ಒಂದು ವೇಳೆ ಪೆಟ್ರೋಲ್ ಜಿಎಸ್‌ಟಿ ವ್ಯಾಪ್ತಿಗೆ ಬಂದರೆ ಶೇ.70ರಷ್ಟಿರುವ ತೆರಿಗೆ ರದ್ದಾಗಿ ಶೇ.12 ಅಥವಾ ಶೇ.18 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಹೀಗಾದಲ್ಲಿ ಪೆಟ್ರೋಲ್ ಬೆಲೆ ಲೀ.ಗೆ 40 – 50 ರೂ. ಗೆ ಸಿಗುತ್ತದೆ. ದೇಶಾದ್ಯಂತ ಒಂದೇ ದರಕ್ಕೆ ಪೆಟ್ರೋಲಿಯಂ ಉತ್ಪನ್ನಗಳು ಸಿಗಲಿವೆ.

Also Read  ನೀವು ವಾಹನಗಳಿಗೆ ಪೆಟ್ರೋಲ್, ಡೀಸೆಲ್‌ ತುಂಬಿಸುತ್ತೀರಾ...? ► ಹಾಗಾದರೆ ಮೋಸ ಹೋಗುವ ಮುನ್ನ ಇದನ್ನೊಮ್ಮೆ ಓದಿ

ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್ ಮತ್ತು ಡೀಸೆಲ್ ಬಂದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಭಾರೀ ಆದಾಯ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಕೇಂದ್ರದ ಆಗ್ರಹಕ್ಕೆ ಮಣಿದು, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಲು ಒಪ್ಪುತ್ತವೆಯಾ ಎಂದು ಕಾದು ನೋಡಬೇಕಾಗಿದೆ.

error: Content is protected !!
Scroll to Top