ಶಾಪಿಂಗ್ ಮಾಡಿ 24 ಗಂಟೆಯೊಳಗೆ ಕೊರೊನಾ ಬಂದರೆ 50 ಸಾವಿರ ಕ್ಯಾಶ್ ಬ್ಯಾಕ್!

(ನ್ಯೂಸ್‌ಕಡಬ) newskadaba.com ತಿರುವನಂತಪುರಂ , ಆ. 19. ಕೊರೊನಾದಿಂದ ವ್ಯಾಪಾರ ಇಲ್ಲದೇ ಸೊರಗಿ ಹೋಗಿರುವ ಈ ಸಮಯದಲ್ಲಿ ಆ ವ್ಯಾಪಾರಿ, ಒಂದು ಜಾಹೀರಾತನ್ನು ನೀಡಿದ್ದರು. ಆಗ ಕೇರಳ ಸರಕಾರದ ಆರೋಗ್ಯ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿತ್ತು.

ಆಗಸ್ಟ್ 15-30 ರ ಅವಧಿಯಲ್ಲಿನ ಬಂಪರ್ ಆಫರ್ ಇದು. ನಮ್ಮ ಅಂಗಡಿಯಲ್ಲಿ ಇಲೆಕ್ಟ್ರಾನಿಕ್ ಐಟಂಗಳನ್ನು ಖರೀದಿಸಿ. ಶಾಪಿಂಗ್ ಮಾಡಿದ 24 ಗಂಟೆಯೊಳಗೆ ಕೊರೊನಾ ಸೋಂಕು ತಗುಲಿದರೆ, ಜಿಎಸ್ಟಿ ಹೊರತು ಪಡಿಸಿ 50 ಸಾವಿರ ಕ್ಯಾಶ್ ಬ್ಯಾಕ್’ಎನ್ನುವ ಜಾಹೀರಾತನ್ನು ಅಂಗಡಿಯ ಮಾಲೀಕ ಹಾಕಿದ್ದರು.ಈ ಬಗ್ಗೆ ಸಿಎಂ ಪಿಣರಾಯಿ ವಿಜಯನ್ ಗೆ ದೂರು ನೀಡಿರುವ ಪಾಲಾ ಮುನ್ಸಿಪಾಲಿಟಿಯ ಕೌನ್ಸಿಲರ್ ಬಿನು ಪುಲಿಕಾಕ್ಕಂಡಂ, ಇದೊಂದು ಕಾನೂನಿಗೆ ವಿರುದ್ದವಾದ ಜಾಹೀರಾತಾಗಿದ್ದು, ಕ್ರಮ ಜರಗಿಸಬೇಕೆಂದು ದೂರು ನೀಡಿದ್ದಾರೆ.

 

 

ಈ ಜಾಹೀರಾತಿನಿಂದ ಕೊರೊನಾ ಸೋಂಕಿತರು ಮನೆಯಿಂದ ಹೊರಬಂದು ಖರೀದಿಸಲು ಬರುವ ಸಾಧ್ಯತೆಯಿದೆ. ಸೋಂಕು ಹರಡುವಿಕೆ ಹೆಚ್ಚಾಗುತ್ತದೆ. ಆರೋಗ್ಯ ಇಲಾಖೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಬಿನು ಮನವಿ ಮಾಡಿದ್ದಾರೆ. ಆರ್ಥಿಕವಾಗಿ ದುರ್ಬಲವಾಗಿರುವವರು ಐವತ್ತು ಸಾವಿರ ರೂಪಾಯಿಯ ಆಸೆಗಾಗಿ ಈ ಮಳಿಗೆಗೆ ಬರುವ ಸಾಧ್ಯತೆಯಿಲ್ಲದಿಲ್ಲ. ಈ ಅಂಗಡಿಯ ಮಾಲೀಕನಿಗೆ ಸಾಮಾಜಿಕ ಕಳಕಳಿಯಿಲ್ಲ”ಎಂದು ಬಿನು ದೂರು ನೀಡಿದ್ದಾರೆ .

 

 

error: Content is protected !!

Join the Group

Join WhatsApp Group