ಇಂದು ಅಟಲ್​ ಬಿಹಾರಿ ವಾಜಪೇಯಿ ಪುಣ್ಯತಿಥಿ ➤ ಹಿರಿಯ ನಾಯಕನನ್ನು ನೆನೆದ ನಾಯಕರು

(ನ್ಯೂಸ್ ಕಡಬ) newskadaba.com ನವದೆಹಲಿ, ಆ,16:  ಇಂದು ಮಾಜಿ ಪ್ರಧಾನಿ ಹಾಗೂ ಬಿಜೆಪಿ ಹಿರಿಯ ನಾಯಕ ಅಟಲ್​ ಬಿಹಾರಿ ವಾಜಪೇಯಿ ಅವರ ಎರಡನೇ ಪುಣ್ಯತಿಥಿ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ಗಣ್ಯಾತಿ ಗಣ್ಯರು ಅಟಲ್​ ಬಿಹಾರಿ ವಾಜಪೇಯಿ ಅವರನ್ನು ನೆನೆದಿದ್ದಾರೆ.

 

ಅಟಲ್​ ಬಿಹಾರಿ ವಾಜಪೇಯಿ ಅವರ ಕೊಡುಗೆಯನ್ನು ನಾವು ಎಂದಿಗೂ ಮರೆಯಲೂ ಸಾಧ್ಯವಿಲ್ಲ. ಅವರ ನೇತೃತ್ವದಲ್ಲಿ ಪರಮಾಣು ಶಕ್ತಿ ಕ್ಷೇತ್ರದಲ್ಲಿ ನಾವು ಸಾಕಷ್ಟು ಸಾಧನೆ ಮಾಡಿದ್ದೇವೆ. ಅಟಲ್​ ಅವರು ಆದರ್ಶ ವ್ಯಕ್ತಿ ಆಗಿದ್ದರು. ಅವರ ಭಾಷಣದಂತೆ, ಮೌನದಲ್ಲೂ ವಿಶೇಷ ತಾಕತ್ತು ಇತ್ತು, ಎಂದು ಮೋದಿ ವಾಜಪೇಯಿ ಅವರನ್ನು ನೆನೆದಿದ್ದಾರೆ.ಉಳಿದಂತೆ, ರಾಷ್ಟ್ರಪತಿ ರಾಮನಾಥ ಕೋವಿಂದ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಗೃಹ ಸಚಿವ ಅಮಿತ್​ ಶಾ ಸೇರಿ ಸಾಕಷ್ಟು ಗಣ್ಯರು ವಾಜಪೇಯಿ ಅವರನ್ನು ನೆನೆದಿದ್ದಾರೆ.1924ರಲ್ಲಿ ಜನಿಸಿದ ವಾಜಪೇಯಿ ದೇಶಕಂಡ ಅದ್ಭುತ ವಾಗ್ಮಿ. ಹಿಂದಿ ಭಾಷೆ ಅರಿಯದವರಿಗೂ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ವಾಜಪೇಯಿ ಸುಲಲಿತವಾಗಿ ಮಾತನಾಡುತ್ತಿದ್ದರು.ಹಲವು ರಾಜಕೀಯ ಪರಿಸ್ಥಿತಿಗಳನ್ನು ವಾಜಪೇಯಿ ಎದುರಿಸಿದ್ದಾರೆ. ಎಂದು ಎದೆಗುಂದಲಿಲ್ಲ, ಧೃತಿಗೆಡಲಿಲ್ಲ, ತಾಳ್ಮೆಯನ್ನೂ ಕಳೆದುಕೊಳ್ಳಲಿಲ್ಲ. ತಮ್ಮದೇ ದಾಟಿಯಲ್ಲಿ ಸಮಸ್ಯೆಗಳನ್ನು ಪರಿಹರಿಸಿದ್ದಾರೆ ವಾಜಪೇಯಿ.

 

 

error: Content is protected !!

Join the Group

Join WhatsApp Group