ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಕೊರೋನಾ ➤ ಕಡಬದಲ್ಲಿ ಇಂದು 8 ಮಂದಿಯಲ್ಲಿ ಸೋಂಕು ದೃಢ

(ನ್ಯೂಸ್ ಕಡಬ) newskadaba.com ಕಡಬ, ಆ. 8, ಗ್ರಾಮೀಣ ಭಾಗದಲ್ಲಿ ಕೊರೋನಾ ದಿನದಿಂದ ದಿನಕ್ಕೆ ತನ್ನ ಆರ್ಭಟವನ್ನು ಹೆಚ್ಚಿಸುತ್ತಿದ್ದು, ಇಂದೂ ಕೂಡಾ ಕಡಬದ ಒಂದೇ ಮನೆಯ ನಾಲ್ಕು ಮಂದಿಯಲ್ಲಿ ದೃಢಪಟ್ಟಿದೆ.

ತಾಲೂಕಿನ ಕೋಡಿಂಬಾಳ ಗ್ರಾಮದ ಒಂದೇ ಮನೆಯ 75 ವರ್ಷದ ವೃದ್ಧ, 45 ವರ್ಷದ ವ್ಯಕ್ತಿ, 28 ವರ್ಷದ ಯುವತಿ ಮತ್ತು 67 ವರ್ಷದ ಮಹಿಳೆ ಹಾಗೂ ಕಾಣಿಯೂರು ಗ್ರಾಮದ ಕೈಮಜಲು ನಿವಾಸಿಗಳಾದ ಒಂದೇ ಮನೆಯ 65 ವರ್ಷದ ಮಹಿಳೆ, 23 ವರ್ಷದ ಯುವತಿ, 20 ವರ್ಷದ ಯುವತಿ ಹಾಗೂ ಕಾಣಿಯೂರು ಗ್ರಾಮದ ನಿವಾಸಿ 15 ವರ್ಷದ ಬಾಲಕನಲ್ಲಿ ಕೊರೊನಾ ಪಾಸಿಟಿವ್ ದೃಢವಾಗಿದೆ.

Scroll to Top