ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ನಿವಾಸದ ಮೇಲೆ ದಾಳಿ ➤ ದುಷ್ಕರ್ಮಿಗಳ ವಿರುದ್ಧ ಎಫ್‍ಐಆರ್ ದಾಖಲು

(ನ್ಯೂಸ್ ಕಡಬ) newskadaba.com ಮುಂಬೈ ಜು 09. ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರು ನಿವಾಸಿಸುತ್ತಿದ್ದ ರಾಜಗೃಹ ದ ಮೇಲೆ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿ ದಾಂಧಲೆಗೈದ ಘಟನೆ ಮಂಗಳವಾರ ನಡೆದಿದ್ದು, ಈ ಕುರಿತಂತೆ ಮುಂಬೈ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.


ಕೆಲ ವ್ಯಕ್ತಿಗಳು ಡಾ. ಅಂಬೇಡ್ಕರ್ ಅವರ ಎರಡು ಕೊಠಡಿಗಳತ್ತ ಕಲ್ಲು ಎಸೆದಿದ್ದಾರೆ ಎಂದು , ಅಂಬೇಡ್ಕರ್ ಅವರ ಮೊಮ್ಮಗ ಸುಜತ್ ತಿಳಿಸಿದ್ದಾರೆ.

Also Read  ಆತ್ಮಹತ್ಯೆಗೆ ಹಾಟ್ ಸ್ಪಾಟ್ ಆಗುತ್ತಿದೆಯೇ ನೇತ್ರಾವತಿ ಸೇತುವೆ?


ದಾಳಿ ವೇಳೆ ಮನೆಯ ಹೊರಗಿದ್ದ ಹೂವಿನ ಕುಂಡಗಳಿಗೆ ಕೂಡ ಹಾನಿಯಾಗಿದೆ. ಘಟನೆಯನ್ನು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಖಂಡಿಸಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

error: Content is protected !!
Scroll to Top