ಕೊರೊನಕ್ಕೆ ರಾಜ್ಯ ತತ್ತರ ➤ ಒಂದೇ ದಿನ 271 ಪಾಸಿಟಿವ್ ಕೇಸ್, 7 ಸೋಂಕಿತರ ಮೃತ್ಯು

(ನ್ಯೂಸ್ ಕಡಬ)newskadaba.com ಬೆಂಗಳೂರು. ಜೂ. 12, ರಾಜ್ಯದಲ್ಲಿ ಕಳೆದ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆ ಅವಧಿಯಲ್ಲಿ 271 ಜನರಿಗೆ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 6,516ಕ್ಕೆ ಏರಿಕೆ ಕಂಡಂತಾಗಿದೆ. ಇಂದು ಬಳ್ಳಾರಿಯಲ್ಲಿ 97, ಬೆಂಗಳೂರು ನಗರದಲ್ಲಿ 36 ಜನರಿಗೆ ಸೋಂಕು ತಗುಲಿದ್ದರೆ, ಉಡುಪಿ 22, ಕಲಬುರಗಿಯಲ್ಲಿ 20, ಧಾರವಾಡದಲ್ಲಿ 19, ದಕ್ಷಿಣ ಕನ್ನಡದಲ್ಲಿ 17 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇನ್ನು ರಾಜ್ಯದಲ್ಲಿ ಇಂದು ಕೊರೋನಾ ಸೋಂಕಿನಿಂದಾಗಿ 7 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ನಾಲ್ವರು, ಹಾಸನದಲ್ಲಿ 1, ಕಲಬುರಗಿಯಲ್ಲಿ 2 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಅನ್ಯ ಕಾರಣಗಳಿಂದ ಸಾವನ್ನಪ್ಪಿದ ಇಬ್ಬರನ್ನು ಸೇರಿಸಿ ಒಟ್ಟು 81 ಸೋಂಕಿತರು ಸಾವನ್ನಪ್ಪಿದ್ದಾರೆ. ವಿಶೇಷ ಅಂದ್ರೆ ರಾಜ್ಯದಲ್ಲಿ ಇಂದು ಕೂಡ ಗುಣಮುಖರಾದವರ ಸಂಖ್ಯೆ ಸೋಂಕಿತರಿಗಿಂತ ಹೆಚ್ಚಿದೆ.

ಇವತ್ತು 464 ಸೋಂಕಿತರು ಗುಣಮುಖರಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ 3440 ಏರಿದ್ದು, 2995 ಆಕ್ಟಿವ್​ ಕೇಸ್​ ಇದೆ ಅಂತಾ ಆರೋಗ್ಯ ಇಲಾಖೆ ತಿಳಿಸಿದೆ. ಇನ್ನು ಈ 271 ಪ್ರಕರಣಗಳಲ್ಲಿ 92 ಅಂತಾರಾಜ್ಯ ಹಾಗೂ 14 ಅಂತಾರಾಷ್ಟ್ರೀಯ ಪ್ರಯಾಣಿಕರು ಇರುವುದಾಗಿ ಮಾಹಿತಿ ಲಭ್ಯವಾಗಿದೆ.

Also Read  ಡಿಕೆಶಿ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ ವಿದ್ಯಾರ್ಥಿ ಪೊಲೀಸ್ ವಶಕ್ಕೆ ➤ 10ನೇ ತರಗತಿ ವಿದ್ಯಾರ್ಥಿಯ ಪ್ಲಾನ್ ಗೆ ಬೆಚ್ಚಿಬಿದ್ದ ಜನತೆ

ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್​..?

ಬಳ್ಳಾರಿ -97
ಬೆಂಗಳೂರು ನಗರ -36
ಉಡುಪಿ-22
ಕಲಬುರಗಿ -20
ಧಾರವಾಡ -19
ದಕ್ಷಿಣ ಕನ್ನಡ -17
ಬೀದರ್ -10
ಹಾಸನ -09
ಮೈಸೂರು -09
ತುಮಕೂರು -07
ಶಿವಮೊಗ್ಗ -06
ರಾಯಚೂರು -04
ಉತ್ತರಕನ್ನಡ -04
ಚಿತ್ರದುರ್ಗ -03
ರಾಮನಗರ -03
ಮಂಡ್ಯ -02
ಬೆಳಗಾವಿ -01
ವಿಜಯಪುರ -01
ಕೋಲಾರ -01

Also Read  ಗುಂಡ್ಯ ಸಮೀಪ ದನದ ತಲೆ, ಕಾಲು ಪತ್ತೆ

error: Content is protected !!
Scroll to Top