ಮಾಜಿ ಕೇಂದ್ರ ಸಚಿವ ಅರ್ಜುನ್ ಚರಣ್ ಸೇಥಿ ನಿಧನ

(ನ್ಯೂಸ್ ಕಡಬ)newskadaba.com ಜೂ. 9, ಎಂಟು ಬಾರಿ ಒಡಿಶಾದ ಭದ್ರಕ್ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕೇಂದ್ರ ಸಚಿವ ಅರ್ಜುನ್ ಚರಣ್ ಸೇಥಿ, ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ರಾತ್ರಿ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಸೇಥಿಯವರು 2000ದಿಂದ 2004ರವರೆಗೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಸಾಮಾಜಿಕ ಮತ್ತು ರಾಜಕೀಯ ವಲಯದಲ್ಲಿ ಸಕ್ರಿಯರಾಗಿದ್ದ ಅವರು, ಎರಡು ಬಾರಿ ಒಡಿಶಾ ವಿಧಾನಸಭೆಗೂ ಆಯ್ಕೆಯಾಗಿದ್ದರು.

ಅರ್ಜುನ್ ಚರಣ್ ತಮ್ಮ ನಿಸ್ವಾರ್ಥ ಸೇವೆ ಹಾಗೂ ಜನಪರ ಕಾಳಜಿಯ ಬಗೆಗಿನ ಬದ್ಧತೆಯಿಂದಾಗಿ ಸುದೀರ್ಘ ಜೀವನದಲ್ಲಿ ಅಪಾರ ಜನಮೆಚ್ಚುಗೆ ಪಡೆದಿದ್ದರು. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಮೀರ್ ಮೊಹಾಂತಿ, ಮಾಜಿ ಕೇಂದ್ರ ಸಚಿವ ಶ್ರೀಕಾಂತ್ ಜೆನಾ ಮತ್ತಿತರರು ಸೇಥಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Also Read  ಕಾಸರಗೋಡು: ಕಣಜದ ಹುಳು ದಾಳಿ ➤ ಕಾರ್ಮಿಕ ಮೃತ್ಯು

 

error: Content is protected !!
Scroll to Top