ದೇಶದಲ್ಲಿ 12 ಸಾವಿರ ಗಡಿ ದಾಟಿದ ಕೊರೋನ ಸೋಂಕಿತರ ಸಂಖ್ಯೆ

ಹೊಸದಿಲ್ಲಿ, ಎ. 16: ದೇಶಾದ್ಯಂತ ಕೊರೋನ ಸೋಂಕಿತರ ಸಂಖ್ಯೆ 12 ಸಾವಿರ ತಲುಪಿದೆ. ಇದುವರೆಗೆ ಕೊರೋನ ವೈರಸ್‌ಗೆ 414 ಮಂದಿ ಬಲಿಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 37 ಮಂದಿಯನ್ನು ವೈರಸ್ ಬಲಿ ಪಡೆದಿದೆ. ದೇಶಾದ್ಯಂತ ಒಟ್ಟು 12,380 ಮಂದಿ ಕೊರೋನ ವೈರಸ್‌ಗೆ ತುತ್ತಾಗಿದ್ದಾರೆ.

ಹೊಸದಿಲ್ಲಿ ಮೌಲಾನಾ ಆಝಾದ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿನ ಅರಿವಳಿಕೆ ತಜ್ಞರಿಗೆ ಕೊರೋನ ವೈರಸ್ ಸೋಂಕು ಪಾಸಿಟಿವ್ ಎಂದು ತಿಳಿದು ಬಂದಿದ್ದು, ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು, ದೇಶಾದ್ಯಂತ ಹರಡಿರುವ ಕೊರೋನ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಿದ ವೈದ್ಯರು, ನರ್ಸ್ ಗಳು ಸೇರಿದಂತೆ ವೈದ್ಯಕೀಯ ಸಿಬ್ಬಂದಿಗೆ ಕೊವಿಡ್19 ಅಂಟಿಕೊಂಡಿರುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ಭಾರತದಲ್ಲಿ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಹೊಸದಿಲ್ಲಿ ಎರಡನೇ ಸ್ಥಾನದಲ್ಲಿದ್ದು, ಬುಧವಾರದ ಅಂಕಿ ಅಂಶಗಳ ಪ್ರಕಾರ ನವದೆಹಲಿಯಲ್ಲಿ 30 ಮಂದಿ ಕೊರೋನ ವೈರಸ್ ನಿಂದ ಪ್ರಾಣ ಬಿಟ್ಟಿದ್ದಾರೆ. ಇನ್ನು, 1,561 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈ ಪೈಕಿ 31 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

Also Read  ಆಟವಾಡುತ್ತಾ ಹಾವನ್ನೇ ಕಚ್ಚಿದ ಮಗು - ಹಾವು ಸಾವು

error: Content is protected !!