ದೇಶದಲ್ಲಿ 10 ಸಾವಿರ ಗಟಿದಾಟಿದ ಕೊರೋನ ಸೋಂಕಿತರ ಸಂಖ್ಯೆ

ಹೊಸದಿಲ್ಲಿ, ಎ.14: ಮಾರಕ ಕೊರೋನ ವೈರಸ್​​ ನಿಯಂತ್ರಣಕ್ಕೆ ಲಾಕ್​ಡೌನ್ ಘೋಷಿಸಿದ್ರೂ, ದೇಶದಲ್ಲಿ ಸೋಂಕಿತರ ಸಂಖ್ಯೆ ಕಮ್ಮಿಯಾಗ್ತಿಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ಗಣನೀಯ ಪ್ರಮಾಣದಲ್ಲಿ ಸೋಂಕು ಹೆಚ್ಚಾಗ್ತಿದೆ. ಇದೀಗ ದೇಶಾದ್ಯಂತ ಸೋಂಕಿತ ಸಂಖ್ಯೆ 10 ಸಾವಿರ ಗಡಿ ದಾಟುವ ಮೂಲಕ ಮತ್ತಷ್ಟು ಆತಂಕ ಹೆಚ್ಚಾಗಿದೆ.

ದೇಶದಲ್ಲಿ ಒಟ್ಟು 10, 363 ಕೊೊರೋನ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿವೆ ಎಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಆಧರಿಸಿ, ಎಎನ್​ಐ ವರದಿ ಮಾಡಿದೆ. ಒಟ್ಟು 10,363 ಕೇಸ್​ಗಳ ಪೈಕಿ 8,988 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ 1035 ಮಂದಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್​ ಆಗಿದ್ದಾರೆ. ಒಟ್ಟು 339 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

error: Content is protected !!

Join the Group

Join WhatsApp Group